ಸುದ್ದಿಬಿಂದು ಬ್ಯೂರೋ
ಕಾರವಾರ
: ಜಿಲ್ಲೆಯಲ್ಲಿ ಮಳೆಗಾಲ ಮುಗಿಯುವ ತನಕ ಎಲ್ಲಾ ಜಲಪಾತ ಹಾಗೂ ಕಡಲ ತೀರಗಳಿಗೆ ಪ್ರವಾಸಿಗರು ಹೋಗದಂತೆ ಜಿಲ್ಲೆಯ ಆಯಾ ತಾಲೂಕಿನ ತಹಶಿಲ್ದಾರರ ನಿರ್ಬಂಧ ಹಾಕಬೇಕು ಎಂದು ನೂತನ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ‌ಅಧಿಕಾರಿಗಳಿಗೆ ಆದೇಶಿಸಿದ್ದಾರೆ‌.

ಉತ್ತರಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಜಲಪಾತಗಳು, ಕಡಲತೀರವಳಿದ್ದು, ಈ ಪ್ರವಾಸಿ ತಾಣಗಳಿಗೆ ರಾಜ್ಯ ಹಾಗೂ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಇಲ್ಲಿ ಬರುವ ಪ್ರವಾಸಿಗರ ಸ್ಪಷ್ಟವಾದ ಮಾಹಿತಿ ಇಲ್ಲದ ಕಾರಣ ಎಲ್ಲರೂ ನೀರಿಗೆ ಇಳಿಯುತ್ತಾರೆ. ಹೀಗಾಗಿ‌‌ ಮಳೆಗಾಲ ಮುಗಿಯುವ ತನಕ ಎಲ್ಲಾ ಕಡಲತೀರ ಹಾಗೂ ಜಲಪಾತಗಳಿಗೆ ಹೋಗದಂತೆ ನಿಷೇಧಿಸುವಂತೆ ಆದೇಶಿದ್ದಾರೆ.

ಭೂ ಕುಸಿತ ಪ್ರದೇಶದಲ್ಲಿ ಪರಿಶೀಲನೆ
ಜಿಲ್ಲೆಯ ಅನೇಕ‌‌ ಕಡೆಯಲ್ಲಿ ಭೂ ಕುಸಿತವಾಗಲಿದೆ ಎಂದು ಜಿಎಸ್ಐ ಈಗಾಗಲೇ ವರದಿ ನೀಡಿದೆ.ಹೀಗೆ ಗುರುತಿಸಿರುವ ಪ್ರದೇಶದಲ್ಲಿ ನೋಡಲ್ ಅಧಿಕಾರಿಗಳು ನಿಗಾ ಇಡಬೇಕು. ನದಿ ತೀರ ಹಾಗೂ ಜಲಪಾತ‌ ಸುತ್ತಮುತ್ತ ಎಲ್ಲಾದ್ರೂ ರೆಸಾರ್ಟ್ ಹಾಗೂ ಹೋಂ ಸ್ಟೇ ಗಳಲ್ಲಿರುವ ಪ್ರವಾಸಿಗರಿಗೆ ನೀರಿಗೆ ಇಳಿಯದಂತೆ ಸಂಬಂಧಪಟ್ಟ ರೆಸಾರ್ಟ್ ,ಹೋಂ ಸ್ಟೇ ಮಾಲೀಕರು ಎಚ್ಚರಿಕೆ ನೀಡಬೇಕು. ಇನ್ನೂ ಅನೇಕ‌ಹಳ್ಳಿಯಲ್ಲಿ ಕಾಲುಸಂಕಗಳಿವೆ ಅದನ್ನ ಗುರುತಿಸಿ ಸೇತುವೆ ನಿರ್ಮಾಣದ ಕುರಿತು ಅಂದಾಜು ವೆಚ್ಚ ತಯಾರಿಸಿ ತಕ್ಷಣ ಸಲ್ಲಿಸಬೇಕು, ಆಸ್ಪತ್ರೆಗಳು, ಅಂಗನವಾಡಿ, ಶಾಲೆಗಳು ಎಲ್ಲೆಲ್ಲಿ ಶಿಥಿಲವಾಗಿದೆ ಅವುಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಮಳೆಯಿಂದಾಗಬಹುದಾದ ಎಲ್ಲಾ ಸಂಪೂರ್ಣವಾಗಿರುವ ಮಾಹಿತಿಯನ್ನ ಅಗಸ್ಟ್ 3ರೊಳಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ‌ ನೀಡಿದ್ದಾರೆ.