Darawad: ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಂದ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮಾಲಾಧಾರಿಗಳು ಅಯ್ಯಪ್ಪಸ್ವಾಮಿ ಮಾಲಾಧಾರಣೆ ನಿಯಮದನ್ವಯ 48 ದಿನಗಳ ಮಂಡಲ ವ್ರತವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಬುಧವಾರ ಸ್ವಾಮಿಗೆ ಲೋಕಕಲ್ಯಾಣಾರ್ಥ ಗಣಹೋಮ, ಲಕ್ಷಾರ್ಚನೆಯನ್ನು ನೇರವೇರಿಸಿದರು.

ಇನ್ನೂ ಓದಿ:- ಟಿಕೆಟ್ ಗಾಗಿ ಅಲೆದಾಡುವ ದುಸ್ಥಿತಿಯಲ್ಲಿ ಅನಂತ್

ಹುಬ್ಬಳ್ಳಿಯ ಗುರು ಸ್ವಾಮಿ ಮೋಹನ್ ಗುರುಸ್ವಾಮಿಗಳು ಅಯ್ಯಪ್ಪನಲ್ಲಿ ನಾವು ನಿಸ್ವಾರ್ಥದಿಂದ ನಮ್ಮ ಇಷ್ಟ-ಕಷ್ಟಗಳನ್ನು ಸಿದ್ದಿಸಿಕೊಳ್ಳಲು ಪ್ರತಿ ವರ್ಷವೂ ಮಾಲೆಯನ್ನು ಧರಿಸಿ ಮಂಡಲ ವೃತವನ್ನು ಪೂರೈಸುತ್ತಾ ಬಂದಿದ್ದೇವೆ ಎಂದರು. ಇವರ ನೇತೃತ್ವದಲ್ಲಿ ಗುರುವಾರ ಸ್ವಾಮಿಗೆ ಅಭಿಷೇಕ, ಫಲಪುಷ್ಪಗಳಿಂದ ಅಲಂಕೃತ ವಿಶೇಷ ಪೂಜೆ ಮಾಡಿ ಭಕ್ತಿ ತೋರಿದರು.

ಪೂರ್ತಿ ಮಂಡಲ ವೃತವನ್ನು ಪೂರೈಸಿದ ಎಲ್ಲ ವೃತಧಾರಿಗಳು ಅಯ್ಯಪ್ಪನ ಮಂಟಪವನ್ನು ನಿರ್ಮಿಸಿ ಮಹಾಪೂಜೆ, ಪಡಿಪೂಜೆ, ಹಾಗೂ ಎಣ್ಣೆ ಸೇವೆಯನ್ನು ಮೋಹನ ಗುರುಸ್ವಾಮೀಜಿ ನೇತೃತ್ವದಲ್ಲಿ ನಡೆಸಿಕೊಟ್ಟರು. ಬಳಿಕ ಸಂಗೀತ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಅಯ್ಯಪ್ಪ ಮಾಲಾಧಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.