ಅಂಕೋಲಾ : ಮಂಗಳಮುಖಿ (manglaa-mukhii ) ವೇಷ ಧರಿಸಿದ ವ್ಯಕ್ತಿಯೊಬ್ಬ, ಹಣಕೊಟ್ಟಿಲ್ಲವೆಂದು ಯುವಕನೊರ್ವನನ್ನು ಚಲಿಸುತ್ತಿದ್ದ ರೇಲ್ವೆಯಿಂದ ಹೊರ ತಳ್ಳಿ ಕೊಲೆಗೆ ಪ್ರಯತ್ನಿಸಿದ್ದಾನೆ ಎಂಬ ಆರೋಪದ ಘಟನೆ ಉತ್ತರಕನ್ನಡ (Uttara Kannada) ಜಿಲ್ಲೆಯ ಅಂಕೋಲಾ ರೇಲ್ವೆ ನಿಲ್ದಾಣದಲ್ಲಿ ನಡೆದಿದೆ.

ಈ ಬಗ್ಗೆ ಆಘಾತಕ್ಕೆ ಒಳಗಾದ ಹೊನ್ನಾವರದ ಮಂಕಿಯ ದರ್ಶನ ಗಣಪತಿ ನಾಯ್ಕ (25) ಅಂಕೋಲಾ ರೇಲ್ವೆ ಸ್ಟೇಷನ ಮಾಸ್ಟರ್ ಸಮೀರ ಅವರಲ್ಲಿ ದೂರು ನೀಡಿದ್ದಾರೆ.

ನಡೆದದ್ದೇನು..?
ಯಶವಂತಪುರ ಕಾರವಾರ ರೈಲಿನಲ್ಲಿ ಹೊನ್ನಾವರದ ಮಂಕಿಯ ದರ್ಶನ ಗಣಪತಿ ನಾಯ್ಕ ಎನ್ನುವವರು ಹೊನ್ನಾವರದಿಂದ ಗೋವಾ ಮಡಗಾಂವಗೆ ಪ್ರಯಾಣ ಬೆಳಿಸಿದ್ದರು. ರೇಲ್ವೆ ಕುಮಟಾ ನಿಲ್ದಾಣಕ್ಕೆ ಬಂದಾಗ ದರ್ಶನ ನಾಯ್ಕ ತನ್ನಲ್ಲಿಂದ 80 ಸಾವಿರ ಹಣವನ್ನು ಅವರ ಸಂಬ0ದಿಕರಿಗೆ ನೀಡಿದ್ದಾರೆ. ಇದನ್ನು ಗಮನಿಸಿದ ಮಂಗಳಮುಖಿಯ ವೇಷಧಾರಿ ಇವನಲ್ಲಿ ಇನ್ನು ಕೂಡ ಹಣವಿರಬಹುದು ಎಂದು ತಿಳಿದು ಹಣಕ್ಕಾಗಿ ಬೇಡಿಕೆ ಇಟ್ಟು ಜಗಳಕ್ಕೆ ನಿಂತಿದ್ದಾನೆ. ಈ ವಿಷಯವನ್ನು ಕುಮಟಾದಲ್ಲಿ ರೇಲ್ವೆ ಸಿಬ್ಬಂದಿಯಲ್ಲಿ ದೂರನ್ನ ದರ್ಶನ ಗಣಪತಿ ನಾಯ್ಕ ಹೇಳಿಕೊಂಡಿದ್ದರು.

ರೇಲ್ವೆ ಸಿಬ್ಬಂದಿ ಮಂಗಳಮುಖಿಯ ವೇಷದಾರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು.
ರೇಲ್ವೆ ಕೇವಲ 8-10 ಪ್ರಯಾಣಿಕರಿದ್ದರು. ಅಂಕೋಲಾ ನಿಲ್ದಾಣಕ್ಕೆ ರಾತ್ರಿ 9-50 ಕ್ಕೆ ಆಗಮಿಸಿದಾಗ ಎಲ್ಲಾ ಪ್ರಯಾಣಿಕರು ಇಳಿದುಕೊಂಡಿದ್ದರು. ಹೀಗಾಗಿ ರೇಲ್ವೆ ಬೋಗಿಯಲ್ಲಿ ಇಬ್ಬರೆ ಉಳಿದಿದ್ದರು. ನಂತರ ಕಾರವಾರದತ್ತ ಸಾಗಲು ರೇಲ್ವೆ ಚಲಿಸುತ್ತಿರುವಾಗಲೆ, ಬೋಗಿಯ ಬಾಗಿಲಲ್ಲಿ ಇದ್ದ ಸಿಂಕ್‌ನಲ್ಲಿ ಮುಖ ತೊಳೆಯುತ್ತಿದ್ದ ದರ್ಶನ ಗಣಪತಿ ನಾಯ್ಕ ವರನ್ನು ಮಂಗಳಮುಖಿ ವೇಷಧಾರಿ ತಳ್ಳಿ ಅಘಫಾತಪಡಿಸಲು ಮುಂದಾಗಿದ್ದಾನೆ. ರೇಲ್ವೆಯಿಂದ ಪ್ಲಾಟ್‌ಪಾರ್ಮನಲ್ಲಿ ಬಿದ್ದು, ಸಾವರಿಸಿಕೊಂಡ ದರ್ಶನ ನಾಯ್ಕ ಕರ್ತವ್ಯದಲ್ಲಿದ್ದ ಸ್ಟೇಷನ ಮಾಸ್ಟರ್ ಸಮೀರ್ ಅವರಲ್ಲಿ ತಮ್ಮ ದೂರನ್ನು ಹೇಳಿಕೊಂಡಿದ್ದಾನೆ.

ಕೂಡಲೆ ರೇಲ್ವೆ ಸ್ಟೇಷನ್ ಮಾಸ್ಟರ್ ಸಮೀರ ಅವರು ಕಾರವಾರದ ರೇಲ್ವೆ ಪೊಲೀಸರಿಗೆ ವಿಷಯ ತಿಳಿಸಿದ್ದು. ತಕ್ಷಣ ಕಾರ್ಯಾಚರಣೆಗೆ ಇಳಿದ ರೇಲ್ವೆ ಇನ್ಸಪೆಕ್ಟರ ಬೀತಿನ್ ಸಿಂಗ್ ರಾಣಾ ನೇತ್ರತ್ವದಲ್ಲಿ ಕಾರವಾರ ನಿಲ್ದಾಣದಲ್ಲಿ ವಿಕೃತವಾಗಿ ಮಂಗಳಮುಖಿಯ ವೇಷ ಧರಿಸಿದ್ದ ವ್ಯಕ್ತಿಯನ್ನು ವಿಚಾರಣೆಗೆ ಮುಂದಾಗಿದ್ದಾರೆ.

ಮಾನವೀಯತೆ ಮೆರೆದವರು

ಈ ವೇಳೆ ಈತ ತೃತೀಯ ಲಿಂಗದ ವ್ಯಕ್ತಿಯಲ್ಲ. ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿರುವದನ್ನು ಕಂಡು ಅವನ್ನನ್ನು ಬಿಟ್ಟು ಕಳುಹಿಸಿಲಾಗಿದೆ ಎಂದು ರೇಲ್ವೆ ಪೊಲೀಸ್ ಮೂಲಗಳು ತಿಳಿಸಿದೆ. ಇತ್ತ ರೇಲ್ವೆಯಿಂದ ಹೊರ ತಳ್ಳಿದ ಪರಿಣಾಮ, ಮತ್ತೆ ರೇಲ್ವೆ ಇಲ್ಲದೆ ಗೋವಾಕ್ಕೆ ಬೇಕರಿ ಕೆಲಸಕ್ಕೆ ಸಾಗಲಾಗದೆ ರಾತ್ರಿ ವೇಳೆ ಅತಂತ್ರನಾಗಿ ನಿಂತ ಯುವಕ ದರ್ಶನ ಗಣಪತಿ ನಾಯ್ಕ ಇತನನ್ನು ಪತ್ರಕರ್ತ ರಾಘು ಕಾಕರಮಠ, ಹೊಟೇಲ ಮನೀಷನ ಮಾಲಕ ಮನೀಷ, ಸತೀಶ ಕುಂಬಾರ ಉಪಚರಿಸಿ, ಗೋವಾಕ್ಕೆ ಹೋಗಲು ವಾಹನ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ವ್ಯಕ್ತಿಯೊಬ್ಬನನ್ನು ಮಂಗಳಮುಖಿ ರೇಲ್ವೆಯಿಂದ ತಳ್ಳಿ, ಕಾರವಾರದತ್ತ ಸಾಗಿದ್ದಾನೆ ಎಂಬ ಮಾಹಿತಿ ಅಂಕೋಲಾ ಸ್ಟೇಷನ ಮಾಸ್ಟರ ಅವರಿಂದ ಬಂದಿತ್ತು. ಕೂಡಲೆ ಆತನನ್ನು ಕಾರವಾರದ ರೇಲ್ವೆ ನಿಲ್ದಾಣದಲ್ಲಿ ವಿಚಾರಣೆ ನಡೆಸಿದಾಗ, ಆತ ಮಂಗಳಮುಖಿ ಅಲ್ಲಾ ಎಂದು ತಿಳಿದುಬಂದಿದೆ. ಅಲ್ಲದೆ ಆತ ಮಾನಸಿಕ ಅಸ್ವಸ್ಥನಂತೆ ಕಂಡು ಬಂದಿದ್ದರಿಂದ ಆತನ ಮೇಲೆ ಪ್ರಕರಣ ದಾಖಲಿಸಲ್ಲ ಎಂದಿದ್ದಾರೆ ಕಾರವಾರ ರೈಲ್ವೆ ಇನ್ಸ್ಪೆಕ್ಟರ್ ಬೀತಿನ ಸಿಂಗ್ ಅವರು