.ಸುದ್ದಿಬಿಂದು ಬ್ಯೂರೋ
ಕುಮಟಾ
: ಕಾಗಲ ಗ್ರಾಮಪಂಚಾಯದ ಎರಡನೇ ಅವಧಿಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಂದು ಬುಧವಾರ ಗ್ರಾಮ ಪಂಚಾಯತದಲ್ಲಿ ನಡೆಯಿತು.
ಕಾಗಲ ಗ್ರಾಮ ಪಂಚಾಯತ ನೂತನ ಅಧ್ಯಕ್ಷರಾಗಿ ಸಾವಿತ್ರಿ ವೆಂಕಟೇಶ್ ಪಟಗಾರ, ಉಪಾಧ್ಯಕ್ಷರಾಗಿ ಶಾಂತ್ ಅಶೋಕ್ ಶೆಟ್ಟಿ ಅವರು ಮುಂದಿನ ಎರಡುವರೆ ವರ್ಷದ ಅವಧಿಗೆ ಆಯ್ಕೆಯಾದರು.

ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ಹೊನ್ನಪ್ಪ ನಾಯಕ್ , ಮಾಜಿ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ವಿ .ಎಲ್ .ನಾಯ್ಕ್, ಜಿ.ಪಂ ಮಾಜಿ ಸದಸ್ಯ ರತ್ನಾಕರ್ ನಾಯ್ಕ್ ತಾ.ಪಂ ಮಾಜಿ ಸದಸ್ಯೆ ಯಶೋಧಾ ಶೆಟ್ಟಿ . ಜಿಲ್ಲಾ ಹಿಂದುಳಿದ ಕಾಂಗ್ರೆಸ್ ನ ಅಧ್ಯಕ್ಷ ಸತೀಶ್ ನಾಯ್ಕ್ ,ಭುವನ್ ಭಾಗ್ವತ್, ಸಚಿನ್ ನಾಯ್ಕ್ ,ಮಾಜಿ ಪಂಚಾಯತ್ ಅಧ್ಯಕ್ಷರಾದ ಶಶಿಕಾಂತ್ ನಾಯ್ಕ್ ,ಮಾಜಿ ಪಂಚಾಯತ್ ಉಪಾಧ್ಯಕ್ಷರಾದ ಸೀತಾ ಭಂಡಾರಿ, ಪಂಚಾಯತ್ ಸದಸ್ಯರುಗಳು, ಸ್ಥಳೀಯ ಮುಖಂಡರಾದ ಶಿವರಾಮ ಪಟಗಾರ, ಹನುಮಂತ ಪಟಗಾರ,ಇಷ್ಮಾಯಿಲ್ ಇನ್ನು ಅನೇಕ‌ರು ಹಾಜರಿದ್ದರು.

ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಇವರಿಗೆ ಅಭಿನಂದನೆಗಳನ್ನು ಸಲ್ಲಿಸಿ ತಿ ಗೌರವಿಸಿದರು..ಅದೇ ಸಂದರ್ಭದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ರಾಗಲು ಸಹಕಾರವನ್ನು ನೀಡಿದ ಕೆಪಿಸಿಸಿಯ ನಿವೇದಿತ ಆಳ್ವಾ ಅವರಿಗೆ ಮತ್ತು ಸಹಕರಿಸಿದ ಮುಖಂಡರಿಗೆ ಧನ್ಯವಾದ ಸಲ್ಲಿಸಲಾಯಿತು..