ಅಂಕೋಲಾ: ತಾಲೂಕಿನ ಹಾರವಾಡ ಗ್ರಾಮದ ನೇತಾಜಿ ಸುಭಾಸ ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಒಕ್ಕಲಕೇರಿಯ ನಂದಶ್ರೀ ಗಣಪತಿ ಗೌಡ ಈಕೆಯು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಸುಭಾಷ್ ನಾಯ್ಕ ಅವರು ಮನೆಗೆ ತೆರಳಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಂದಶ್ರೀಯು ಅಡೆತಡೆ ಓಟ (ಹರ್ಡಲ್ಸ್) ದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದು ನಮಗೆಲ್ಲ ಸಂತಸ ವಿಷಯ. ನಮ್ಮ ಊರಿನ ಹಲಕ್ಕಿ ಸಮುದಾಯದ
ಈ ಹುಡುಗಿ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿ ಅವಳಿಗೆ ಯಾವುದೇ ಸಹಾಯ ಸಹಕಾರಕ್ಕೆ ನಾನು ಸದಾ ಸಿದ್ಧ ಎಂದು ಭರವಸೆ ನೀಡಿದರು.
ಗಮನಿಸಿ