ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ : ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಜುಲೈ 16ರಂದು ರಾಷ್ಟೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತವಾಗಿ ಹತ್ತಕ್ಕೂ ಹೆಚ್ಚು ಮಂದಿ ಭೀಕರ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದರು. ಈ ಘಟನೆ ಸಮಯದಲ್ಲೇ ಮನೆ ಬಿಟ್ಟು ನಾಪತ್ತೆಯಾಗಿದ್ದ ಯುವಕ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾನೆ
ಶಿರೂರು ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಗಂಗಾವಳಿ ನದಿಯ ಒಡಲು ಸೇರಿದ್ದರು. ಆರಂಭದಲ್ಲಿ ಘಟನೆಯಲ್ಲಿ ನಾಪತ್ತೆಯಾದವರ ಸಂಖ್ಯೆ ಗಣನೆಗೆ ದೊರೆತಿರಲಿಲ್ಲ,ಈ ದುರ್ಘಟನೆಯಲ್ಲಿ ಮಡಿದವರ ಮೃತದೇಹಗಳು ದೊರೆಯುತ್ತಿದ್ದಂತೆ ಸಾವಿನ ಸಂಖ್ಯೆಯನ್ನು ಅಂದಾಜಿಸಲಾಗಿತ್ತು ಹಾಗೆಯೇ ಅಧಿಕೃತವಾಗಿ ಮೂವರ ಮೃತದೇಹಕ್ಕೆ ಶೋಧ ಕಾರ್ಯಾಚರಣೆ ನಿರಂತರವಾಗಿ ಸಾಗಿತ್ತು.
ಆದರೆ ಜುಲೈ 29 ರಂದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣವೊಂದು ದಾಖಲಾಗಿತ್ತು.ಅದು ಗುಡ್ಡ ಕುಸಿತದಲ್ಲಿ ಸಾವನ್ನಪ್ಪಿದ ಲಕ್ಷ್ಮಣ ನಾಯ್ಕರ ಸಂಬಂಧಿ 37 ವರ್ಷದ ರಾಮಾ ಜಾನು ನಾಯ್ಕ ಎನ್ನುವವರದಾಗಿತ್ತು, ಈತ ಜುಲೈ 13 ತಾಯಿ ಜೊತೆ ಜಗಳಮಾಡಿ ಮನೆಬಿಟ್ಟು ಹೋಗಿದ್ದ ಬಗ್ಗೆ ಆತನ ತಾಯಿ ಶೈಲಜಾ ಜಾನು ನಾಯ್ಕ ಮಗನನ್ನು ಹುಡುಕಿಕೊಡಿ ಎಂದು ಅಂಕೋಲಾ ಪೊಲೀಸರ ಮೊರೆ ಹೋಗಿದ್ದರು.ಆದರೆ ನಾಪತ್ತೆಯಾಗಿದ್ದ ರಾಮಾ ನಾಯ್ಕನ ಪತ್ತೆಗೆ ಇಳಿದ ಪೊಲೀಸರ ತಂಡ ಹಲವು ಮಾಹಿತಿ ಕಲೆಹಾಕಿ ರಾಮಾ ನಾಯ್ಕ ಜುಲೈ 16 ರಂದು ನಡೆದ ಶಿರೂರು ಭೀಕರ ಗುಡ್ಡ ಕುಸಿತದ ದುರಂತದಲ್ಲಿ ಸಾವನ್ನಪ್ಪಿದ್ದ ಹೋಟೆಲ್ ಮಾಲೀಕ ಲಕ್ಷ್ಮಣ ನಾಯ್ಕರ ಹತ್ತಿರದ ಸಂಬಂಧಿ ಎಂದು ತಿಳಿದು ಬಂದಿದ್ದು,ಲಕ್ಷ್ಮಣ ನಾಯ್ಕರ ಹೋಟೆಲ್ ಗೆ ಏನಾದರೂ ತೆರಳಿದ್ದನಾ? ಗುಡ್ಡ ಕುಸಿದದಲ್ಲಿ ಏನಾದರೂ ನಾಪತ್ತೆಯಾಗಿರಬಹುದಾ? ಎನ್ನುವ ಸಂಶಯ ವ್ಯಕ್ತಪಡಿಸಿದ್ದರು ಎನ್ನಲಾಗಿತ್ತು.
ಗುಡ್ಡ ಕುಸಿತದ ಸಂದರ್ಭದಲ್ಲಿಯೇ ಆತ ನಾಪತ್ತೆಯಾಗಿದ್ದ ಹಿನ್ನೆಲೆ ಸಾಕಷ್ಟು ಚರ್ಚೆಗಳು ಉಂಟಾಗಿತ್ತು. ನಿರಂತರ ಪತ್ತೆ ಕಾರ್ಯದಲ್ಲಿದ್ದ ಪೊಲೀಸರಿಗೆ ಆತನ ಕುರುಹು ಪತ್ತೆಯಾಗಿರಲಿಲ್ಲ. ಬರೋಬ್ಬರಿ ಎರಡು ತಿಂಗಳ ಬಳಿಕ ರಾಮಾ ನಾಯ್ಕ ಬೆಂಗಳೂರಿನ ಮಾಗಡಿ ಮೇನ್ ರೋಡ್, ಕೋಟಿಗೆಪಾಳ್ಯ ನಿರಾಶ್ರಿತ ಕೇಂದ್ರದಲ್ಲಿರುವುದನ್ನು ಪತ್ತೆ ಹಚ್ಚ್ಚಿದ್ದ ಪೊಲೀಸರು ಆತನನ್ನು ತಾಯಿ ಶೈಲಜಾರವರಿಗೆ ಒಪ್ಪಿಸಿ ನಿಟ್ಟುಸಿರು ಬಿಟ್ಟಿದ್ದಾರೆ.
ಏನಿದು ಪ್ರಕರಣ?
ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆ ಅಮ್ಮನೊಂದಿಗೆ ಗಲಾಟೆ ಮಾಡಿ ಹೊರಟವನು ಇಲ್ಲಿಯವರೆಗೆ ಬರೆದಿರುವ ಕಾರಣ ಯುವಕನ ತಾಯಿ ಹುಡುಕಿಕೊಡಿ ಎಂದು ಪೊಲೀಸರ ಮೊರೆ ಹೋದ ಘಟನೆ ತಾಲೂಕಿನಲ್ಲಿ ವಂದಿಗೆಯಲ್ಲಿ ನಡೆದಿತ್ತು.
ವಂದಿಗೆ ನಿವಾಸಿ 37 ವರ್ಷದ ರಾಮಾ ಜಾನು ನಾಯ್ಕ ನಾಪತ್ತೆಯಾಗಿದ್ದ ಯುವಕನಾಗಿದ್ದ, ತಾಯಿ ಶೈಲಜಾ ಬಳಿ ಜುಲೈ 13ರ ಮಧ್ಯಾಹ್ನ ಪಟ್ಟಣದ ಮೀನು ಮಾರುಕಟ್ಟೆ ಬಳಿ ಹಣ ನೀಡುವಂತೆ ಕೇಳಿದ್ದು, ಹಣ ನೀಡಿದ್ದರಿಂದ ಕೋಪಗೊಂಡು ತೆರಳಿದವನು ಮನೆಗೆ ಬಾರದೆ ಇರುವುದರಿಂದ ಆತನ ತಾಯಿ ಜುಲೈ 29 ರಂದು ದೂರು ನೀಡಿದ್ದು ಅಂಕೋಲಾ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈತ ಸಹ ಲಕ್ಷ್ಮಣ ನಾಯ್ಕ ಅವರ ಸಂಬಂಧಿಯಾಗಿದ್ದ ಕಾರಣ ತಾಯಿ ಜೊತೆ ಜಗಳವಾಡಿದ ನಂತರ ಲಕ್ಷ್ಮಣ ನಾಯ್ಕ ಅವರ ಹೊಟೇಲ್‌ಗೆ ಏನಾದ್ರೂ ಹೋಗಿ ಉಳಿದುಕೊಂಡಿದ್ದನ್ನ ಎನ್ನುವ ಬಗ್ಗೆ ಸಾಕಷ್ಟು ಅನುಮಾನ ಕಾಡಿತ್ತು..
ಆದರೆ ಕಳೆದ ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದ ಯುವಕ ಪತ್ತೆಯಾಗಿದ್ದು,ಎಲ್ಲಾ ಅಂತೆ ಕಂತೆಗಳಿಗೆ ಕೊನೆಗೂ ಬ್ರೇಕ್ ಬಿದ್ದಿದೆ ಎನ್ನಲಾಗಿದೆ.,
ಗಮನಿಸಿ