suddibindu.in
Kumta: ಕುಮಟಾ : ಲೋಕಸಭಾ ಚುನಾವಣಾ ‌ಅಖಾಡ‌ ಜೋರಾಗಿದ್ದು, ಉತ್ತರ ಜಿಲ್ಲೆಯಲ್ಲಿಯೂ ಸಹ ಚುನಾವಣಾ ಕಾವೂ ಜೋರಾಗಿದೆ. ಇನ್ನೂ ಕುಮಟಾ ವಿಧಾನಸಭಾ ‌ಕ್ಷೇತ್ರದ‌ ಕಾಂಗ್ರೆಸ್‌‌ನಲ್ಲಿ ಈಗ ಒಗ್ಗಟ್ಟಿನ‌ ಮಂತ್ರ ಜಪ ಮಾಡಲಾಗುತ್ತಿದೆ.

ಉತ್ತರಕನ್ನಡ ಲೋಕಸಭಾ ಕ್ಷೇತ್ರದ ‌ಆರು ವಿಧಾನಸಭಾ ಕ್ಷೇತ್ರದಲ್ಲಿ ಒಂದಾಗಿರುವ ಕುಮಟಾ ವಿಧಾಸಭಾ ಕ್ಷೇತ್ರದಲ್ಲಿ ಈಗ ಕಾಂಗ್ರೆಸ್ ಸಂಘಟನೆ ಚುರುಕಾಗಿದೆ. ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಭುವನ್ ಭಾಗವತ್ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಮೂಲಕ ಕುಮಟಾ ಕ್ಷೇತ್ರದಿಂದ ಕಾಂಗ್ರೆಸ್‌ಗೆ ಹೆಚ್ಚಿನ ಮತ‌‌ ನೀಡಲು ಮುಂದಾಗತ್ತಿದ್ದಾರೆ.

ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಅವರು ಕಾಂಗ್ರೆಸ್‌ಗೆ ವಾಪಸ್ ಆಗಿರುವುದು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಬಲ‌ ಬಂದಂತಾಗಿದೆ. ಕಳೆದ ವಿಧಾಸಭಾ ಚುನಾವಣೆಯಲ್ಲಿ ಪಕ್ಷದಿಂದ ದೂರ ಉಳಿದಿ ಶಾರದಾ ಮೋಹನ‌ ಶೆಟ್ಟಿ ಅವರು ಇಂದು ಕುಮಟಾ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿದ್ದು, ಈ ವೇಳೆ ಅಭಿಮಾನಿಗಳು ಪಕ್ಷದ ಕಾರ್ಯಕರ್ತರು ಅಭಿನಂದಿಸಿದರು.

ತದ ನಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭುವನ್ ಭಾಗ್ವತ್ ಮತ್ತು ಪ್ರಚಾರ ಸಮಿತಿ ಅಧ್ಯಕ್ಷರಾದ ಹೊನ್ನಪ್ಪ ನಾಯಕ, ಮಂಜುನಾಥ್ ಎಲ್ ನಾಯ್ಕ್ ಹಾಗೂ ಕುಮಟಾ ಹೊನ್ನಾವರ ಯುವ ಮುಖಂಡರಾದ ರವಿಕುಮಾರ ಮೋಹನ್ ಶೆಟ್ಟಿ ಮತ್ತು ಅನೇಕ ಮುಖಂಡರು ಕಾರ್ಯಕರ್ತರು ಒಳಗುಡಿ ಲೋಕಸಭಾ ಚುನಾವಣೆಯ ಕಾರ್ಯತಂತ್ರದ ಬಗ್ಗೆ ಚರ್ಚಿಸಿ ಕುಮಟಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಅಂಜಲಿ ನಿಂಬಾಲ್ಕರ್ ಅವರಿಗೆ ಹೆಚ್ಚಿನ ಮತದಲ್ಲಿ ಗೆಲ್ಲಿಸುವ ಬಗ್ಗೆ ಭರವಸೆ ನೀಡಿದರು.