suddibindu.in
ದಾಂಡೇಲಿ : ನದಿಯಲ್ಲಿ ಈಜಲು ಹೋಗಿದ್ದ ಹುಬ್ಬಳ್ಳಿ ಮೂಲದ ಒಂದೇ ಕುಟುಂಬದ ಆರು ಮಂದಿ ನೀರಿನಲ್ಲಿ ಮುಳುಗಡೆಯಾಗಿ ಮೃತ ಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಕಾಳಿ ನದಿಯಲ್ಲಿ ನಡೆದಿದೆ.

ಮೃತಪಟ್ಟವರು

ನಜೀರ್ ಅಹ್ಮದ್ (40),ಅಲ್ಛೀಯಾ ಅಹ್ಮದ್ (10), ಮೋಹಿನ್ ಅಹ್ಮದ್ (6)
ರೇಷಾ ಉನ್ನಿಸಾ (38), ಇಫ್ರಾ‌ಅಹ್ಮದ್ (15),ಅಬೀದ್ ಅಹ್ಮದ್ (12) ಎಂದು ಗುರುತಿಸಲಾಗಿದೆ.

ಹುಬ್ಬಳ್ಳಿಯ ಈಶ್ವರ ನಗರದ ಒಂದೇ ಕುಟುಂಬದ ಎಂದು ಮಂದಿ ಪ್ರವಾಸಕ್ಕೆಂದು ದಾಂಡೇಲಿಗೆ ಬಂದಿದ್ದರು. ಈ ವೇಳೆ ಆರು ಮಂದಿ ಈಜಲು ಕಾಳಿ ನದಿಗೆ ಇಳಿದಿದ್ದು, ಈ ವೇಳೆ ಕಾಲು ಜಾರಿ ನದಿಯಲ್ಲಿ ಮುಳುಗಡೆಯಾಗಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ

ಮೃತ ಆರು ಮಂದಿಯ ಮೃತ ದೇಹವನ್ನ ಹೊರ ತೆಗೆಯಲಾಗಿದ್ದು, ದಾಂಡೇಲಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ.