ಅಂಕೋಲಾ : ಇತ್ತೀಚಿನ ದಿನದಲ್ಲಿ ಅನೇಕರು ನಕಲಿ ಮಂಗಳಮುಖಿರ ವೇಷ ತೊಟ್ಟು ಸಾರ್ವಜರಿಗೆ ಕಿರುಳುಳ (Harassment) ನೀಡಿ ಅಸಭ್ಯವಾಗಿ ನಡೆದುಕೊಳ್ಳುವ ಮೂಲಕ ಹಣ ವಸೂಲಿ ಮಾಡುತ್ತಿರುವುದು ಉತ್ತರ ಕನ್ನಡ (Uttar kannada) ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಅಂತಹವರನ್ನ ಕಂಡರೆ ತಕ್ಷಣ ಪೊಲೀಸರ (police) ಗಮನಕ್ಕೆ ತರುವ ಕೆಲಸ‌ವಾಗಬೇಕೆಂದು ಅಂತರಂಗ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ಆಯಿಷಾ ಹೊನ್ನಾವರ ಒತ್ತಾಯಿಸಿದರು.

ಹಣಕ್ಕಾಗಿ ಅಂಕೋಲಾ ಬಳಿ ರೈಲ್ವೆಯಲ್ಲಿ ಇದ್ದ ವ್ಯಕ್ತಿಗೆ ಹಣ ನೀಡಿವಂತೆ ಬೆದರಿಕೆ ಹಾಕಿ‌ ಬಳಿಕ ಆತ ಹಣ ನೀಡದೆ‌ ಇದ್ದಾಗ ರೈಲ್ವೆಯಿಂದ ಹೊರಗೆ ತಳ್ಳಿರುವ ಘಟನೆ ಬಳಿಕ ಮಾಧ್ಯಮದರವ ಜೊತೆ ಮಾತ್ನಾಡಿರುವ ಮಂಗಳಮುಖಿ ಅಂತರಂಗ ಸಂಘಟನೆ ಜಿಲ್ಲಾ‌ ಮುಖ್ಯಸ್ಥರು ನಿಜವಾದ ಯಾವ ಮಂಗಳಮುಖಿಯರು ಸಹ ನಾಗರಿಕರು ಹಣ ನೀಡದೆ ಇದ್ದಲ್ಲಿ, ಕೆಟ್ಟ ವರ್ತನೆ ತೋರುವದಿಲ್ಲ. ಮುಖಕ್ಕೆ ಮಾಸ್ಕ ಹಾಕಿಕೊಂಡು, ಇಲ್ಲವೆ ಅರೆಬರೆಯಾಗಿ ಮುಖ ಮುಚ್ಚಿಕೊಂಡು ಇಲ್ಲವೆ ಬಣ್ಣ ಹಂಚಿಕೊಂಡು ಹಣವನ್ನು ಕೇಳುವದಿಲ್ಲ.

ನಾವು ಸಭ್ಯವಾಗಿ ಜನರೊಂದಿಗೆ ವರ್ತಿಸಿ ಹಣವನ್ನು ಕೇಳುತ್ತೇವೆ. ನಮ್ಮ ಸಂಘಟನೆಯವರು ನಾಗರಿಕರೊಂದಿಗೆ ಉತ್ತಮ ಸಂಬಂದವನ್ನು ಇಟ್ಟುಕೊಂಡು ಸಮಾಜಮುಖಿಯಾಗಿ ಬದುಕುತ್ತಿದ್ದೇವೆ. ಆದರೆ ಉಕ ಕನ್ನಡ ಜಿಲ್ಲೆಯಲ್ಲಿ ಹೀಗೆ ಜನರೊಂದಿಗೆ ಅಸಭ್ಯವಾಗಿ ವರ್ತಿಸುವ ವೇಷಧಾರಿ, ನಕಲಿ ಮಂಗಳಮುಖಿಯರಿಂದ ಸಮಾಜದ ಸ್ವಾರ್ಥ ಕೆಡುತ್ತಿರುವದು ದುರಷೃಷ್ಠಕರ ಸಂಗತಿಯಾಗಿದೆ ಎಂದರು.

ಸದಸ್ಯೆ ಸುಹಾನಾ ಮಾತನಾಡಿ ಮೊನ್ನೆ ಸೋಮವಾರ ರಾತ್ರಿ ಅಂಕೋಲಾ ರೇಲ್ವೆ ನಿಲ್ದಾಣದಲ್ಲಿ ಮಂಗಳಮುಖಿ ವೇಷ ಹಾಕಿಕೊಂಡು ಪ್ರಯಾಣಿಕನನ್ನು ಚಲಿಸುತ್ತಿರುವ ರೇಲ್ವೆಯಿಂದ ಹೊರ ತಳಿದ್ದು ಅತ್ಯಂತ ಘೋರ ಘಟನೆಯಾಗಿದೆ. ಇತನನ್ನು ರೇಲ್ವೆ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ರೇಲ್ವೆ ಪೊಲೀಸರ ಮುಂದೆ ತಾನೊಬ್ಬ ಹುಚ್ಚನಂತೆ ವರ್ತಿಸಿ, ಪೊಲೀಸ್ ಪ್ರಕರಣದಿಂದ ಪಾರಾಗಿದ್ದಾನೆ.ಈ ಹಿಂದೆ ನಾವೆ ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೇವು.
ಈಗ ಮತ್ತೆ ಆತ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ್ದಾನೆ.ಯುವಕನನ್ನು ತಳ್ಳಿದ್ದಾಗ ಆತ ಮೃತಪಟ್ಟರೆ ಅದಕ್ಕೆ ಯಾರು ಜವಬ್ದಾರು ಆಗುತ್ತಿದ್ದರು. ಈ ಹಿನ್ನಲೆಯಲ್ಲಿ ಆತನ ಮೆಲೆ ಕಠಿಣ ಕಾನುನು ಕ್ರಮ ತೆಗೆದುಕೊಳ್ಳುವಂತಾಗಬೆಕು ಎಂದು ಒತ್ತಾಯಿಸಿದರು.

ಖಜಾಂಚಿ ಪಾರ್ವತಿ ಮಾತನಾಡಿ ನಕಲಿ ಮಂಗಳಮುಖಿಯರ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತಾಗಬೇಕು. ಹಾಗೆ ಸರಕಾರ ಮಂಗಳಮುಖಿರ ಶ್ರೇಯೋಭಿವೃದ್ಧಿಗೆ ವಿಶೇಷವಾಗಿ ಯೋಜನೆಯನ್ನು ಸಿದ್ಧಪಡಿಸಿ ನಮಗೂ ಕೂಡ ಸಮಾಜಮುಖಿಯಾಗಿ ಜೊತೆಗೆ ಸ್ವಾವಲಂಬಿಯಾಗಿ ಬದಕಲು ನೆರವು ನೀಡವಂತಾಗಬೇಕು ಎಂದು ಆಗ್ರಹಿಸಿದರು.