ಸುದ್ದಿಬಿಂದು ಬ್ಯೂರೋ
ಶಿರಸಿ
: ಬಸ್ (KSRTC) ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಸ್ ಚಲಿಸುಕೊಂಡು ಬಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಸ್ಕೂಟಿ (Scooty) ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ನಗರದ (sirsi city) ಅಂಬೇಡ್ಕರ್ ಭವನದ ಎದುರಿನ ರಸ್ತೆಯಲ್ಲಿ ನಡೆದಿದೆ.

ಅಪಘಾತಗೊಂಡ ಸ್ಕೂಟಿಯಲ್ಲಿದ್ದ ದೇವರಕೆರೆ ನಿವಾಸಿ ಗಣೇಶ ಬಾಲಕೃಷ್ಣ ಕರಾಳ,(20) ಮೃತಪಟ್ಟವನಾಗಿದ್ದಾನೆ. ಅಪಘಾತ ಪಡಿಸಿದ ಹುಬ್ಬಳ್ಳಿ (Hubli) ಡಿಪೋದ KSRTC ಬಸ್ ಚಾಲಕ ಬಸವರಾಜ ಗುರುಪಾದಪ್ಪ ಹಾದಿಮನಿ ರವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.