ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಕಳೆದ ಕೆಲ ದಿನಗಳ ಹಿಂದೆ ನಿಧನರಾದ ಮೀನುಗಾರ ಮುಖಂಡ ರಾಜು ತಾಂಡೇಲ ನಿಧನದ ವಿಚಾರದಲ್ಲಿ ಸ್ಥಳೀಯ ಶಾಸಕ ಸತೀಶ್ ಸೈಲ್ ಅವರ ಮೇಲೆ ಮಾಡಲಾಗಿರುವ ಆರೋಪವನ್ನ ಎಂ ಎಲ್ ಸಿ ಗಣಪತಿ ಉಳ್ವೇಕರ್ ತಳ್ಳಿ ಹಾಕಿದ್ದಾರೆ..
ಕಾರವಾರ ಜಿಲ್ಲಾ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದ ಉಳ್ವೇಕರ್ ಅವರು ರಾಜು ತಾಂಡೇಲ್ ಅವರ ಸಾವು ನಮ್ಮಗೆಲ್ಲರಿಗೂ ನೋವು ಉಂಟು ಮಾಡಿದೆ. ಆದರೆ ಈ ಘಟನೆಯ ಬಳಿಕ ಅನೇಕರು ಅನೇಕ ರೀತಿಯಲ್ಲಿ ಶಾಸಕ ಸತೀಶ ಸೈಲ್ ಅವರ ವಿರೋಧ ಅರೋಪ ಮಾಡುತ್ತಿರುವುದನ್ನ ಕೇಳಿದ್ದೇನೆ. ಆದರ ಇದು ರಾಜಕೀಯ ಉದ್ದೇಶ ಹೊರತು ಬೇರೆ ಏನು ಇಲ್ಲ..
ಈ ಘಟನೆಯಲ್ಲಿ ಶಾಸಕ ಸೈಲ್ ಅವರು ಪ್ರಾಮಾಣಿಕವಾಗಿ ಕಾರ್ಯಮಾಡಿದ್ದಾರೆ.ಈ ಘಟನೆಯ ಬಗ್ಗೆ ನಾನು ಕೂಡ ಮಾಹಿತಿ ಪಡೆದುಕೊಂಡಿದ್ದೇನೆ.ಆದರೆ ಈ ರೀತಿಯಾಗಿ ಒಬ್ಬರ ಮೇಲೆ ದುರುದ್ದೇಶದಿಂದ ಆರೋಪ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ ಎನ್ನುವ ಮೂಲಕ ಶಾಸಕ ಸತೀಶ್ ಸೈಲ್ ವಿರುದ್ದ ಬಂದಿರುವ ಆರೋಪವನ್ನ ತಳ್ಳಿ ಹಾಕಿದ್ದಾರೆ.
ಗಮನಿಸಿ