ಸುದ್ದಿಬಿಂದು ಬ್ಯೂರೋ
ಗದಗ: ಚಿತ್ರನಟ ಯಶ್(Actor Yash)ಕಟೌಟ್ ಕಟ್ಟುವ ವೇಳೆ ವಿದ್ಯುತ್ ಸ್ಪರ್ಷದಿಂದ ಮೂವರು ಯಶ್ ಅಭಿಮಾನಿಗಳು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ಲಕ್ಷೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಅಂಬೇಡ್ಕರ್ ಸರ್ಕಲ್ ನಲ್ಲಿ ನಡೆದಿದೆ.
ಇದನ್ನ ಇನ್ನೂ ಓದಿ:- ಟಿಕೆಟ್ ಗಾಗಿ ಅಲೆದಾಡುವ ದುಸ್ಥಿತಿಯಲ್ಲಿ ಅನಂತ್
ಹನಮಂತ ಹರಿಜನ (24), ಮುರಳಿ ನಡವಿನಮನಿ (20), ನವೀನ ಗಾಜಿ (20) ಮೃತ ದುರ್ದೈವಿಗಳಾಗಿದ್ದಾರೆ. ಘಟನೆಯಲ್ಲಿ ಇನ್ನೂ 3ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ, ಲಕ್ಷೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 25ಅಡಿ ಎತ್ತರದ ಕಟೌಟ್ ಕಟ್ಟುವ ವೇಳೆ ವಿದ್ಯುತ್ ತಂತಿ ಸ್ಪರ್ಷ ವಾಗಿ ಮಧ್ಯರಾತ್ರಿ ದುರ್ಘಟನೆ ನಡೆದಿದ್ದು, ಗದಗ ಜಿಲ್ಲೆ ಲಕ್ಷೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕರ ಸಾವಿನ ಬೆನ್ನಲ್ಲೇ ಲಕ್ಷೇಶ್ವರ ತಾಲೂಕ ಆಸ್ಪತ್ರೆಗೆ ಶಾಸಕ ಡಾ ಚಂದ್ರು ಲಮಾಣಿ ಭೇಟಿ ನೀಡಿ, ಮೃತ ಕುಟುಂಬಕ್ಕೆ ಸಾಂತ್ವನ ನೀಡಿದ್ದು.ಅಧಿಕಾರಿಗಳು ಹಾಗೂ ಸರ್ಕಾರದ ಗಮನಕ್ಕೆ ತಂದು ಮೃತ ಹಾಗೂ ಗಾಯಾಳು ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯ ಮಾಡಲಾಗುವುದು ಎಂದಿದ್ದಾರೆ..