ಸುದ್ದಿಬಿಂದು ಬ್ಯೂರೋ
ಕಾರವಾರ
: ರಾಜ್ಯದಲ್ಲಿ 134 ಸ್ಥಾನವನ್ನ ಗೆಲ್ಲುವ ಮೂಲಕ ಕಾಂಗ್ರೆಸ್ ಪೂರ್ಣಬೆಂಬಲದೊಂದಿಗೆ ರಾಜ್ಯದಲ್ಲಿ ಅಧಿಕಾರ ಗದ್ದುಗೆ ಎರಿರುವ ಕಾಂಗ್ರೆಸ್‌ ನಲ್ಲಿ ಅದರಲ್ಲೂ ಉತ್ತರಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡರು ನಿಗಮ ಮಂಡಳಿ ಮೇಲೆ‌ ಕಣ್ಣಿಟ್ಟಿದ್ದು ಸ್ಥಾನ ಗಿಟ್ಟಿಸಿಕೊಳ್ಳಲು ತಮ್ಮ ತಮ್ಮ ನಾಯಕ ಮೂಲಕ ಲಾಭಿ ನಡೆಸಲಾರಂಭಿಸಿದ್ದಾರೆ. ಯಾರೇಲ್ಲಾ ನಿಗಮ‌ಮಂಡಳಿ‌ ರೇಸ್ ‌ನಲ್ಲಿದ್ದಾರೆ.ಯಾರಿಗೆ ಒಲಿಯಬಹುದು ಎನ್ನುವ ಬಗ್ಗೆ ಸಂಪೂರ್ಣ ರಿಪೋರ್ಟ್ ಇಲ್ಲಿದೆ.

ಉತ್ತರಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈ ಈ ಬಾರಿ ಕಾಂಗ್ರೆಸ್ ನಾಲ್ಕು ಕ್ಷೇತ್ರವನ್ನ ಗೆದ್ದುಕೊಂಡಿದೆ. ಯಲ್ಲಾಪುರ ಹಾಗೂ ಕುಮಟ ಕ್ಷೇತ್ರ ಹೊರತು ಪಡಿಸಿ ಉಳಿದ ಎಲ್ಲಾ ಕ್ಷೇತ್ರವೂ ಕಾಂಗ್ರೆಸ್ ಪಾಲಾಗಿದೆ.‌ಕುಮಟ/ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ‌ಅಭ್ಯರ್ಥಿಗೆ ಭಾರೀ ಹಿನ್ನಡೆಯಾತ್ತು. ಆರಂಭದಲ್ಲಿ ಕುಮಟ ಕ್ಷೇತ್ರದಲ್ಲಿಯೇ ಅತಿ ಹೆಚ್ಚು ಟಿಕೆಟ್ ಆಕಾಂಕ್ಷಿಗಳಿದ್ದರು ಕೂಡ ಎಲ್ಲರನ್ನ ಕೈ ಬಿಟ್ಟು ದೆಹಲಿ ನಾಯಕರ ಅಣತಿಯಂತೆ ನಿವೇದಿತಾ ಆಳ್ವಾ ಅವರಿಗೆ ಕಾಂಗ್ರೆಸ್ ಸ್ಪರ್ಧೆಗಿಳಿಸಿತ್ತು. ಇದು ಕಾಂಗ್ರೆಸ್ ಸೋಲಿಗೆ ಕಾರಣ ಕೂಡ ಎನ್ನುವುದು ಜಿಲ್ಲಾ ನಾಯಕರಿಂದ ರಾಜ್ಯ ನಾಯಕರಿಗೂ ತಿಳಿದ ಸತ್ಯ.

ಯಾರಿದ್ದಾರೆ ರೇಸ್ ನಲ್ಲಿ.
ಕುಮಟದಲ್ಲಿ ಮಂಜುನಾಥ ಎಲ್ ನಾಯ್ಕ,ಭಾಸ್ಕರ್ ಪಟಗಾರ, ರತ್ನಾಕರ ನಾಯ್ಕ,ಗಾಯತ್ರಿ ಗೌಡ, ಆರ್ ಎಚ್ ನಾಯ್ಕ, ಇವರಲ್ಲಿ ಮಂಜುನಾಥ ನಾಯ್ಕ ಬೆಂಬಲಕ್ಕೆ ಬಿ ಕೆ ಹರಿಪ್ರಸಾದ ಇದ್ದಾರೆ. ರತ್ನಾಕರ್ ನಾಯ್ಕ ಸಹ ತಮ್ಮ‌ ಪ್ರಭಾವಿ ನಾಯಕರ ಮೂಲಕ ಪ್ರಯತ್ನ ನಡೆಸಿದ್ದಾರೆ.

ಇನ್ನೂ ಸಿದ್ದಾಪುರದ ವಸಂತ‌ ನಾಯ್ಕ ಅವರು ಕೂಡ ಪ್ರಬಲವಾಗಿ ಪ್ರಯತ್ನ ನಡೆಸುತ್ತಿದ್ದು, ಶಿರಸಿ ಕ್ಷೇತ್ರದಲ್ಲಿ ಅರಣ್ಯ ಅತಿಕ್ರಮಣ ಹೋರಾಟಗಾರ ರವೀಂದ್ರನಾಥ ನಾಯ್ಕ ಸಹ ಪ್ರಭಲ ಪೈಪೋಟಿಯಲ್ಲಿದ್ದಾರೆ.

ಈ ಭಾರಿ ಭೀಮಣ್ಣ ‌ನಾಯ್ಕ ಅವರ ಗೆಲುವಿನಲ್ಲಿ ಹಗಲಿರುಳು ಶ್ರಮಿಸುವ ಮೂಲಕ‌ ಸಿದ್ದಾಪುರ ಭಾದಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಮತಗಳು ಬರುವಂತೆ‌ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿರುವುದು ರಾಜ್ಯ ನಾಯಕರ‌ ಗಮಕ್ಕೂ ಸಹ ಬಂದಿದೆ.ಕುಮಟಾದ ಆರ್.ಎಚ್.ನಾಯ್ಕ, ಗಾಯತ್ರಿ ಗೌಡ ಸಹ ತಮ್ಮದೆ ರೀತಿಯಲ್ಲಿ ಪ್ರಯತ್ನ ಮುಂದುವರೆಸಿದ್ದಾರೆ.

ಆದರೆ‌ ದೆಹಲಿ ನಾಯಕಯರಿಂದ ಟಿಕೆಟ್ ‌ಗಿಟ್ಟಿಸಿಕೊಂಡು ಸೋತ್ತಿರುವ ನಿವೇದಿತ್ ಆಳ್ವ ಇಲ್ಲಿಯೂ ಸಹ ದೆಹಲಿ ನಾಯರಿಂದ ಒತ್ತಡ ತರುವ ಪ್ರಯತ್ನ ‌ಏನೋ ನಡೆಸಿದ್ದಾರೆ. ಆದರೆ ಕಾಂಗ್ರೆಸ್ ಗೆ ರಾಜ್ಯದಲ್ಲೇ ಅತೀ ಹೀನಾಯವಾಗಿ ಸೋತ್ತಿರುವ ಕ್ಷೇತ್ರ ಕಾಂಗ್ರೆಸ್ ಕೈ ತಪ್ಪಿರುವುದು ಹಾಗೂ ಈ ಹಿಂದೆ‌ ಇವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ಸಿಕ್ಕಿರುವ ಕಾರಣ ಮತ್ತೆ ಅವಕಾಶ ಕಷ್ಟವಾಗಿದೆ ಎಂದು ಹೇಳಲಾಗತ್ತಾ ಇದೆ. ಇನ್ನೂ ಶಿರಸಿಯ ಎಸ್.ಕೆ.ಭಾಗವತ, ದೀಪಕ್ ಹೆಗಡೆ ದೊಡ್ಡರು, ಕಾರವಾರದ ಕೆ.ಶಂಭು ಶೆಟ್ಟಿ, ಅಂಕೋಲಾದ ಪಾಂಡುರಂಗ ಗೌಡ, ವಿನೋದ ನಾಯ್ಕ, , ಯಲ್ಲಾಪುರದ ಶ್ರೀನಿವಾಸ ಭಟ್ ಧಾತ್ರಿ ಸೇರಿದಂತೆ ಹಲವರು ಪ್ರಬಲ ಆಕಾಂಕ್ಷಿ ಪಟ್ಟಿಯಲ್ಲಿದ್ದಾರೆ ಎನ್ನು ಕುರಿತು ಮಾಹಿತಿ ಲಭ್ಯವಾಗಿದೆ.