ಪಶ್ಚಿಮ ಬಂಗಾಳ : ಮೊಬೈಲ್ ಗಾಗಿ ಮಕ್ಕಳು ಹಟ ಮಾಡಿ ಊಟ, ನಿದ್ದೆ ಬಿಟ್ಟಿರುವುದನ್ನ ಕೇಳಿದ್ದೇವೆ ಆದರೆ ಇಲ್ಲೊಂದು ದಂಪತಿಗಳು ಮೊಬೈಲ್ , ಐಪೋನ್ (iphone) ಖರೀದಿಗಾಗಿ ಹೆತ್ತ ಮಗುವನ್ನೆ ಬೇರೆಯವರಿಗೆ ಮಾರಾಟ ಮಾಡಿರುವ ಆಘಾತಕಾರಿ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದಿದೆ.
ಪಶ್ಚಿಮ ಬಂಗಾಳದ(west bengal)ಈ ದಂಪತಿ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು(Instagram reel) ಮಾಡಲು ಐಫೋನ್ ಖರೀದಿಸಲು ಮುಂದಾಗಿದ್ದರೆ. ಆದರೆ ಇವರ ಬಳಿ ಅಷ್ಟೊಂದು ಹಣ ಇರಲಿಲ್ಲವಂತೆ ಆರ್ಥಿಕ ಸಮಸ್ಯೆ ಉಂಟಾಗಿ ಕೊನೆಗೆ ತಮ್ಮ 8 ತಿಂಗಳ ಮಗುವನ್ನೆ ಮಾರಾಟ ಮಾಡಿದ್ದಾರೆ
ಈ ಪ್ರಕರಣಕ್ಕೆ ಸಂಬಂಧಿಸಿ ಮಗು ಮಾರಾಟ ಮಾಡಿರುವ ಮಗುವಿನ ಹೆತ್ತ ತಾಯಿ ಹಾಗೂ ಮಗುವನ್ನು ಖರೀದಿಸಿದ ಮಹಿಳೆಯನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಮಗುವಿನ ತಂದೆ ಜೈದೇವ್ ತಲೆಮರೆಸಿಕೊಂಡಿದ್ದು ಪೊಲೀಸರು ಆತನ ಬಂಧನಕ್ಕಾಗಿ ಬಲೆ ಬಿಸಿದ್ದಾರೆ.
ಮಗು ಮಾರಾಟ ಮಾಡಿದ ದಂಪತಿಗಳು ಆರ್ಥಿಕವಾಗಿ ಸದೃಢರಾಗಿರಲಿಲ್ಲ ಜೊತೆಗೆ ನೆರೆಹೊರೆಯವರಲ್ಲಿ ಸಾಲ ಮಾಡಿಕೊಂಡಿದ್ದರು.
ಆದರೆ ಇತ್ತೀಚಿನ ದಿನಗಳಲ್ಲಿ ಇವರು ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಕಂಡಿದ್ದರು ಎನ್ನಲಾಗಿದ್ದು, ಆದರೆ ದಂಪತಿಗಳಿಗೆ ಇದ್ದ ಎಂಟು ತಿಂಗಳ ಹೆಣ್ಣು ಮಗು ಕೂಡಾ ಮನೆಯಲ್ಲಿ ಕಾಣುತ್ತಿರಲಿಲ್ಲ ಈ ನಡುವೆ ಪೋಷಕರ ಕೈಯಲ್ಲಿ ಐಫೋನ್ ಬಂದಿದ್ದು ನೆರೆಹೊರೆಯವರಲ್ಲಿ ಅನುಮಾನ ಹುಟ್ಟುಹಾಕಿತ್ತು. ಮಗು ಕಾಣದಿದ್ದಾಗ ನೆರೆಹೊರೆಯವರು ಬಹಳ ದಿನಗಳಿಂದ ನಿಮ್ಮ ಮಗು ಕಾಣುತ್ತಿಲ್ಲ. ಎಲ್ಲಿದ್ದಾಳೆ ಎಂದು ವಿಚಾರಿಸಿದ್ದಾರಂತೆ. ಆಗ ಐಫೋನ್ ಖರೀದಿಗಾಗಿ ಮಗು ಮಾರಾಟ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.