ಸುದ್ದಿಬಿಂದು ಬ್ಯೂರೋ
ಕಾರವಾರ
: ಅರಬ್ಬೀ ಸಮುದ್ರದ ಸುಮಾರು 20 ನಾಟಿಕಲ್ ಮೈಲುಗಳನಷ್ಟು ದೂರಲ್ಲಿ. ಆರ್‌ವಿ ಸಿಂಧು ಸಾಧನಾ ಹೆಸರಿನ ಹಡಗಿನಲ್ಲಿ ಇಂಜಿನ್ ವೈಫಲ್ಯ ಕಂಡುಬಂದಿದ್ದು, ಅದರಲ್ಲಿ ಎಂಟು ಹಿರಿಯ ವಿಜ್ಞಾನಿಗಳು, ವೈಜ್ಞಾನಿಕ ಉಪಕರಣಗಳು ಸೇರಿ 36ಮಂದಿಯನ್ನ ಕೋಸ್ಟ್ ಗಾರ್ಡ್ (ICG) ಸಿಬಂದಿಗಳು ರಕ್ಷಣೆ ಮಾಡಿರುವ ಘಟನೆ ಇಂದು ಗುರುವಾರ ನಡೆದಿದೆ.

ಸಿಎಸ್‌ಐಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷಿಯಾನೋಗ್ರಫಿ (NIO)ಸಂಶೋಧನಾ ಹಡಗಿನಲ್ಲಿ ಇಂಜಿನ್ ವೈಫಲ್ಯದಿಂದ ಅಪಾಯಕ್ಕೆ ಸಿಲುಕಿತ್ತು. ಇದರಲ್ಲಿ ಎಂಟು ಖ್ಯಾತ ವಿಜ್ಞಾನಿಗಳು ಸೇರಿ 36ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ‌. ಈ ಹಡಗು ಅಪಾಯಕಾರಿಯಾಗಿ ಚಲಿಸುತ್ತಿತ್ತು ಎಂದು ಗೋತ್ತಾಗಿದ್ದು, ಅದರಲ್ಲಿದ್ದ ತೈಲ ಸಹ ಸೋರಿಕೆಗೆ ಆಗಬಹುದು ಎಂದು ಮಾಹಿತಿ ಬಂದ ತಕ್ಷಣ,ICG ತಂಡ ರಕ್ಷಣೆ ಕಾರ್ಯದಲ್ಲಿ ತೊಡಗಿಕೊಂಡು ಹಡಗು ಹಾಗೂ ಎಂಟು ಹಿರಿಯ ವಿಜ್ಞಾನಿಗಳು, ಮೌಲ್ಯಯುತ ವೈಜ್ಞಾನಿಕ ಉಪಕರಣಗಳು ಮತ್ತು ಸಂಶೋಧನಾ ಮಾಹಿತಿ ಸೇರಿದಂತೆ 36 ಜನರನ್ನ ರಕ್ಷಣೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಒಂದು ವೇಳೆ ಏನಾದ್ರೂ ಹಡಗಿನಲ್ಲಿದ್ದ ತೈಲ ಏನಾದರೂ ಸೇರಿಕೆ ಆಗಿದಲ್ಲಿ ಸಮುದ್ರದಲ್ಲಿನ ಜಲಚರಗಳಿಗೆ ಅಪಾಯ ಆಗುವುದರ ಜೊತೆಗೆ ಅಪಾಯಕಾರಿ ಮಾಲಿನ್ಯಕ್ಕೆ ದೊಡ್ಡ ಮಟ್ಟದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಸಹ ಇತ್ತು ಎನ್ನಲಾಗಿದೆ. ಈ ಹಡಗನ್ನ ಗೋವಾಕ್ಕೆ ತೆಗೆದುಕೊಂಡು ಹೋಗಲು ICG ತಂಡ ಯಶಸ್ವಿಯಾಗಿ ಪ್ರಯತ್ನಿಸಿದ್ದು, ಇನ್ನು ಹಡಗಿನಲ್ಲಿ ಇದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ.