suddibindu.in
ಹುಬ್ಬಳ್ಳಿ : ಇಂದು ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತಗಳನ್ನ ಹಾಕಿಸಿದವರಿಗೆ ಅಯೋಧ್ಯೆ ದರ್ಶನ ಭಾಗ್ಯ ಸಿಗಲಿದೆ. ಎನ್ನುವ ಬಗ್ಗೆ ವಾಟ್ಸಾಪ್ ಗ್ರೂಫ್‌ಗಳಲ್ಲಿ ಹಿಗೊಂದು ವಿಚಾರ ಹರಿದಾಡುತ್ತಿದೆ.

ಈ ಬಗ್ಗೆ ಧಾರವಾಡ ಜಿಲ್ಲೆಯ ಪ್ರಮುಖ ಗ್ರೂಫ್‌ಗಳಲ್ಲಿ ಪೋಸ್ಟರ್ ಹರಿಬಿಡಲಾಗಿದ್ದು, ಕಾರ್ಯಕರ್ತರಲ್ಲಿ ಯಾರೂ ಹೋಗಲು ಅವಕಾಶ ಸಿಗಬಹುದೆಂದು ಕಾಯುವಂತಾಗಿದೆ.

ಮತದಾನ ನಡೆದ ಬೂತ್‌ನಲ್ಲಿ ಅರ್ಧದಷ್ಟು ಮತಗಳು ಭಾರತೀಯ ಜನತಾ ಪಕ್ಷಕ್ಕೆ ಬಂದರೇ, ಅಂಥವರಿಗೆ ಈ ಅವಕಾಶ ಸಿಗಲಿದೆ. ಧಾರವಾಡ ಜಿಲ್ಲೆಯ 1901 ಬೂತ್‌ಗಳ ಪೈಕಿ ಎಷ್ಟು ಜನರಿಗೆ ಈ ಅವಕಾಶ ಸಿಗತ್ತೆ‌ ಎಂಬುದನ್ನ ತಿಳಿಯಲು ಜೂನ್ ನಾಲ್ಕರ ವರೆಗೆ ಕಾಯಬೇಕಿದೆ.