ಸುದ್ದಿಬಿಂದು ಬ್ಯೂರೋ ವರದಿ
ಬಳ್ಳಾರಿ : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಐದು ತಿಂಗಳ ಬಳಿ ನಟ ದರ್ಶನ್‌ಗೆ ಅನಾರೋಗ್ಯ ಕಾರಣದ ಹಿನ್ನಲೆಯಲ್ಲಿ ಷರತ್ತು ಬದ್ದ ಜಾಮೀನು ನೀಡಿ ಹೈಕೋರ್ಟ್ ದರ್ಶನ್‌ಗೆ ಬಿಡುಗಡೆ ಮಾಡಿದೆ.ಆದರೆ ಜೈಲಿನಿಂದ ಬಿಡುಗಡೆ ಹೊಂದಿರುವ ನಟ ದರ್ಶನ್ ಮಾತ್ರ ಮನೆಗೆ ಹೋಗಲು ಸಾಧ್ಯವಾಗದೆ ಆಸ್ಪತ್ರೆಗೆ ತೆರಳಿದ್ದಾರೆ.
ಈಗಾಗಲೇ 8ಷರತ್ತು ಹೈಕೋರ್ಟ್ ಬಿಡುಗಡೆ ಮಾಡಿದ ಬಳಿಕ ಮನೆಗೆ ಹೋಗಬೇಕಾಗಿದ್ದ ದರ್ಶನ್ ಮಾತ್ರ ಮನೆಗೆ ಹೋಗದೆ ಆಸ್ಪತ್ರೆಗೆ ದಾಖಲಾಗುವಂತಾಗಿದೆ. ಜೈಲಿನಿಂದ ಬಿಡುಗಡೆ ಆದ ನಂತರದಲ್ಲಿ ಮೈಸೂರಿಗೆ ಕರೆದುಕೊಂಡು ಹೋಗುವ ಬಗ್ಗೆ ದರ್ಶನ್ ಪತ್ನಿ ಹಾಗೂ ಕುಟುಂಸ್ಥರು ಯೋಚನೆ ಮಾಡಿದ್ದರು. ಆದರೆ ಬೆಂಗಳೂರು ಬಿಟ್ಟು ಎಲ್ಲಿಯೂ ಹೋಗದಂತೆ ಕೋರ್ಟ್ ಆದೇಶ ಇರುವ ಕಾರಣ ಮೈಸೂರಿಗೆ ಹೋಗಬೇಕು ಎನ್ನುವ ದರ್ಶನ್‌ಗೆ ನಿರಾಶೆಯಾಗಿದೆ.
ಇನ್ನೂ ದರ್ಶನ್ ಬೆಂಗಳೂರಿನ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಅವರು ಆಸ್ಪತ್ರೆಗೆ ದಾಖಲಾದ ಬಳಿಕ ಆ ವರದಿಯನ್ನ ಕೋರ್ಟ್‌ಗೆ ನೀಡಬೇಕು ಎಂದು ಕೋರ್ಟ್ ಷರತ್ತಿನಲ್ಲಿ ಉಲ್ಲೇಖ ಮಾಡಿದೆ. ಹೀಗಾಗಿ ಬಳ್ಳಾರಿ ಜೈಲಿನಿಂದ ಬಿಡುಗಡೆ ಹೊಂದಿರುವ ದರ್ಶನ್ ಆಸ್ಪತ್ರೆಗೆ ದಾಖಲಾಗಿ ಕೋರ್ಟ್‌ಗೆ ವರದಿ ನೀಡಬೇಕಾಗಿದೆ. ಹೀಗಾಗಿ ಎಚ್ ಎಲ್ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಗೆ ನಟ ದರ್ಶನ್ ದಾಖಲಾಗಿದ್ದಾರೆ ಎನ್ನಲಾಗಿದೆ. ಸದ್ಯ ನಟ ದರ್ಶನ್‌ಗೆ ಜಾಮೀನಿ ಸಿಕ್ಕರೂ ಕೂಡ ಅವರಿಗೆ ಮನಸ್ಸಿಗೆ ಬಂದ ಹಾಗೆ ಎಲ್ಲಿ ಬೇಕೋ ಅಲ್ಲಿ ಹೋಗುವಂತಿಲ್ಲ..
ಇದನ್ನೂ ಗಮನಿಸಿ