ಅಂಕೋಲಾ: ತಾಲೂಕಿನ ಶಿರೂರು ಬಳಿ ಹೆದ್ದಾರಿ ಪಕ್ಕದಲ್ಲಿ ಗುಡ್ಡಕುಸಿತ ಉಂಟಾಗಿ ಒಂದೇ ಕುಟುಂಬದ ಐವರು ಸೇರಿ ಏಳು ಮಂದಿ ಮಣ್ಣನ ಅಡಿಯಲ್ಲಿ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ..

ಘಟನೆಯಲ್ಕಿ ಲಕ್ಷ್ಮಣ ನಾಯ್ಕ (47) ಶಾಂತಿ ನಾಯ್ಕ(36) ರೋಶನ (11) ಅವಾಂತಿಕಾ (6) ಜಗನ್ನಾಥ (55) ಸಾವನ್ನಪ್ಪಿದವರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ 66ರಲ್ಲಿ ಐಆರ್‌ಬಿ ಕಂಪನಿ ಹೆದ್ದಾರಿ ಅಗಲೀಕರಣಕ್ಕಾಗಿ ಭಾರೀ ಪ್ರಮಾಣದಲ್ಲಿ ಗುಡ್ಡ ಅಗೆದಿರುವ ಕಾರಣ ಭಾರೀ ಮಳೆಗೆ ಗುಡ್ಡ ಕುಸಿತ ಉಂಟಾಗಿದೆ. ಇನ್ನೂ ಇದೇ ವೇಳೆ ಹೆದ್ದಾರಿಯಲ್ಲಿ ನಿಲ್ಲಿಸಿಟ್ಟ ಟ್ಯಾಂಕರ್ ಸಹ ಮಣ್ಣಿನ ರಭಸಕ್ಕೆ ಗಂಗಾವಳಿ ನದಿಯಲ್ಲಿ ಕೊಚ್ಚಿಹೋಗಿದ್ದು, ಅದರಲ್ಲಿದ್ದ ಚಾಲಕ ಹಾಗೂ ಕ್ಲಿನರ್ ಸಹ ಸಾವನ್ನಪ್ಪಿರುವ ಶಂಕೆ ಇದೆ.