ಸುದ್ದಿಬಿಂದು ಬ್ಯೂರೋ ವರದಿ
ಚೆನ್ನಪ್ಪಣ : ಚೆನ್ನಪ್ಪಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರ ಚುರುಕಾಗಿದ್ದು, ಮೈತ್ರಿ ಅಭ್ಯರ್ಥಿ ನಿಖಿಲ್‌ಕುಮಾರಸ್ವಾಮಿ ಪರ ಉತ್ತರಕನ್ನಡ ಜಿಲ್ಲೆಯ ಜೆಡಿಎಸ್ ಮಖಂಡ ಸೂರಜ್ ನಾಯ್ಕ ಸೋನಿ ಅವರು ಚೆನ್ನಪ್ಪಣ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದು, ನಿಖಿಲ್ ಗೆಲ್ಲುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅವರು ಇಂದು ಚೆನ್ನಪ್ಪಣದ ಹಲವು ಭಾಗದಲ್ಲಿ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಬೆಳಿಗ್ಗಯಿಂದಲ್ಲೆ ಪ್ರಚಾರ ನಡೆಸಿದ್ದು, ಅನೇಕ ಕಡೆ ಮನೆ ಮನೆಗೆ ತೆರಳಿ ನಿಖಿಲ್ ಪರ ಮತಯಾಚನೆ ಮಾಡಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸೂರಜ್ ಸೋನಿ ಅವರು ಚೆನ್ನಪ್ಪಣ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆಯಾಗಿದೆ.ಇಲ್ಲಿ ದೇವೆಗೌಡರು ಹಾಗೂ ಕುಮಾರಸ್ವಾಮಿ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ನೀರಾವರಿ ಯೋಜನೆ ಸೇರಿದಂತೆ ಎಲ್ಲಾ ವರ್ಗದ ಜನರಿಗಾಗಿ ಅನೇಕ ಯೋಜನೆಯನ್ನ ತಂದಿದ್ದಾರೆ. ಇಲ್ಲಿನ ಮತದಾರರು ದೇವೆಗೌಡರ ಬಗ್ಗೆ ಅಪಾರವಾದ ಪ್ರೀತಿ ಇಟ್ಟುಕೊಂಡಿದ್ದಾರೆ.
ಈ ಹಿಂದೆ ಕುಮಾರಸ್ವಾಮಿ ಅವರು ಸಹ ಇದೆ ಕ್ಷೇತ್ರದಿಂದ ಗೆದ್ದವರಾಗಿದ್ದು, ಇದು ಕುಮಾರಸ್ವಾಮಿ ಅವರಿಗೆ ಹೊಸ ಕ್ಷೇತ್ರವೇನು ಅಲ್ಲ..ನಾನು ಕುಮಟಾದಿಂದ ಇಲ್ಲಿಗೆ ಬಂದು ಪ್ರಚಾರದಲ್ಲಿ ಪಾಲ್ಗೊಂಡಿದ್ದೇನೆ. ಈಗಾಗಲೆ ಕ್ಷೇತ್ರದ ಅನೇಕ ಕಡೆ ಸುತ್ತಾಡಿದ್ದೇನೆ. ಹೋದ ಕಡೆಯಲ್ಲೆಲ್ಲಾ ನಿಖಲ್ ಪರವಾದ ವಾತಾವರಣ ಇದೆ. ಕುಮಾರಸ್ವಾಮಿ, ದೇವೆಗೌಡರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಜೊತೆಗೆ ಬಿಜೆಪಿಯ ಬೆಂಬಲದೊಂದಿಗೆ ನಿಖಿಲ್ ಅವರು ಗೆಲ್ಲುವುದರಲ್ಲಿ ಯಾವುದೆ ಅನುಮಾನವಿಲ್ಲ ಎಂದಿದ್ದಾರೆ.
ಗಮನಿಸಿ