ಸುದ್ದಿಬಿಂದು ಬ್ಯೂರೋ
ಬೆಂಗಳೂರು :ಚಂದನವನದ ಖ್ಯಾತ ನಟ ದಿವಂಗತ ವಿಷ್ಣುವರ್ಧನ್ ಅವರ ಪತ್ನಿ ಹಾಗೂ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ (Bharathi vishnuvardan) ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂದು ತಿಳಿದುಬಂದಿದೆ.

ಅವರು ಮಂಡಿನೋವಿನಿಂದಾಗಿ ಆರೋಗ್ಯ ತೊಂದರೆಗೆ ಒಳಗಾಗಿದ್ದು, ಸದ್ಯ ಅವರಿಗೆ ಚಿಕಿತ್ಸೆ ಪಡೆಯುತ್ತಿದ್ದು, ಸರಿಯಾಗಿ ಆಹಾರ ಕೂಡ ಸೇವನೆ ಮಾಡುತ್ತಿಲ್ಲ ಎನ್ನಲಾಗಿದ್ದು, ಕಳೆದ ವಾರ ನಂದಿ ಅವಾರ್ಡ್ಸ್ ಕಾರ್ಯಕ್ರಮದಲ್ಲೂ ಭಾರತಿ ವಿಷ್ಣುವರ್ಧನ್ ಭಾಗಿಯಾಗಿರಲಿಲ್ಲ. ಅವರಿಗೆ ಕೆಲವು ಸಮಯದಿಂದಲೂ ಮಂಡಿ ನೋವಿನ ಸಮಸ್ಯೆ ಪದೇ ಪದೇ ಕಾಣಿಸಿಕೊಳ್ಳುತ್ತಿದೆ. ಈಗಲೂ ಅದೇ ಸಮಸ್ಯೆ ಕಾಣಿಸಿಕೊಂಡಿದೆಯಷ್ಟೇ. ಗಾಬರಿ ಪಡುವಂತದ್ದು ಏನೂ ಇಲ್ಲ ಎಂದು ಅಳಿಯ ಅನಿರುದ್ಧ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಭಾರತಿ ವಿಷ್ಣುವರ್ಧನ್ ಅವರ ಆರೋಗ್ಯ (health) ಹದಗೆಟ್ಟಿದ್ದು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.ಹೆಚ್ಚಿನ ಮಾಹಿತಿ ಹೊರಬರಬೇಕಿದೆ.