ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ : ಚಲಿಸುತ್ತಿದ್ದ ಲಾರಿ ಸ್ಕಿಡ್ ಆಗಿ ಲಾರಿ ಪಲ್ಟಿಯಾಗಿ ಬಿದ್ದು ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿರುವ ಘಟನೆ ಅರಬೈಲ್ ಘಟ್ಟದಲ್ಲಿ ನಡೆದಿದೆ.
ಹೆದ್ದಾರಿಯಲ್ಲಿ ಬಿದ್ದಿರುವ ಭಾರೀ ಹೊಂಡವನ್ನ ತಪ್ಪಿಸಲು ಹೋಗಿ ಲಾರಿ ಹೆದ್ದಾರಿಯಲ್ಲಿಯೇ ಅಡ್ಡಲಾಗಿ ಬಿದ್ದಿದೆ.ಹೆದ್ದಾರಿಯಲ್ಲಿ ಲಾರಿ ಬಿದ್ದ ಪರಿಣಾಮವಾಗಿ ಕಿಲೋ ಮೀಟರ್‌ಗಳಷ್ಟು ದೂರದವರೆಗೆ ವಾಹನಗಳು ಸಾಲು ಗಟ್ಟಿ ನಿಲ್ಲುವಂತಾಗಿತ್ತು.
ಹೆದ್ದಾರಿಯಲ್ಲಿ ನಿತ್ಯವೂ ಪರದಾಟ
ಅಂಕೋಲಾ ಯಲ್ಲಾಪುರ ಹೆದ್ದಾರಿ 63ರಲ್ಲಿ ಅರಬೈಲ್ ಘಾಟ ಬಳಿ ಭಾರಿ ಪ್ರಮಾಣದಲ್ಲಿ ಹೊಂಡಗಳು ಬಿದ್ದ ಪರಿಣಾಮ ಈ ಹೆದ್ದಾರಿಯಲ್ಲಿ ನಿತ್ಯವೂ ಸಂಚರಿಸುವ ವಾಹನ ಸವಾರರು ಪರದಾಟ ನಡೆಸಲುತ್ತಲೆ ಇದ್ದಾರೆ. ಈ ಭಾರೀ ಸುರಿದ ಭಾರೀ ಮಳೆಯಿಂದಾಗಿ ಭಾರೀ ಹೊಂಡಗಳು ಬಿದ್ದಿವೆ..ಆದರೆ ಈ ಭಾಗದಲ್ಲಿ ಹೆದ್ದಾರಿಯಲ್ಲಿ ಬಿದ್ದಿರುವ ಹೊಂಡಗಳನ್ನ ದುರಸ್ಥಿ ಮಾಡದೆ. ಗಟಾರ ದುರಸ್ಥಿ ಮಾಡಲಾಗುತ್ತಿದೆ. ಹೆದ್ದಾರಿಯಲ್ಲಿ ಬಿದ್ದ ಹೊಂಡಗಳನ್ನ ಮೊದಲು ದುರಸ್ಥಿ ಮಾಡುವಂತೆ ಸ್ಥಳೀಯರು ಒತ್ತಾಯಿಸುತ್ತಲೆ ಬಂದಿದ್ದಾರೆ.ಆದರೆ ಈ ಬಗ್ಗೆ ಸಂಬಂಧ ಪಟ್ಟವರು ಇನ್ನೂ ತನಕ ಕ್ರಮ ಜರುಗಿಸದೆ ಇರುವುದು ದುರಂತ…
ಗಮನಿಸಿ