ಸುದ್ದಿಬಿಂದು ಬ್ಯೂರೋ
ಕುಮಟ : ಆಟವಾಡುತ್ತಿದ್ದ ಪುಟ್ಟ ಬಾಲಕಿ ಓರ್ವಳು ಆಕಸ್ಮಿಕವಾಗಿ ಮನೆ ಅಂಗಳದಲ್ಲ ಬಿದ್ದು ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಹೆರವಟ್ಟಾದಲ್ಲಿ ನಡೆದಿದೆ.

ಐದು ವರ್ಷದ ಧೃತಿ ನಾರಾಯಣ ಪಟಗಾರ ಎಂಬಾಕೆಯೆ ಮೃತ ಪಟ್ಟಿರುವ ಬಾಲಕಿಯಾಗಿದ್ದಾಳೆ‌.ಮೂಲತಃ ಹಿರೇಗುತ್ತಿಯವಳಾಗಿದ್ದಾಳೆ. ಈಕೆ ತಾಯಿ ಜೊತೆ ಹೆರವಟ್ಟಾದಲ್ಲಿರುವ ದೊಡ್ಡಮ್ಮನ ಮನೆಗೆ ಬಂದಿದ್ದಳು.

ಈ ವೇಳೆ ಮನೆಯ ಹೊರಗಡೆಯಲ್ಲಿ ಆಟವಾಡುತ್ತಿದ್ದಾಗ ಬಿದ್ದಿದ್ದು, ಈ ವೇಳೆ ಬಾಲಕಿಯ ತಲೆಗೆ ಗಾಯವಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ‌. ಬಾಲಕಿಯ ಮೃತ ದೇಹವನ್ನ ಕುಮಟ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ.