ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ :ಯುವತಿ ಓರ್ವಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿ ಓರ್ವ ಯುವತಿಯ ಕೈ ಹಿಡಿದು ಅಸಭ್ಯವಾಗಿ ವರ್ತಿಸಿ ಸ್ಥಳೀಯರನ್ನ ಕಂಡು ಪರಾರಿಯಾಗಿರುವ ಘಟನೆ ಶಿರಸಿ ತಾಲೂಕಿನ ಬಿಸಲಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಆಂಗೋಡ ಕೊಪ್ಪದಲ್ಲಿ ನಡೆದಿದೆ.
ಯುವತಿ ರಸ್ತೆಯಲ್ಲಿ ಒಬ್ಬಳೆ ನಡೆದುಕೊಂಡು ಹೋಗುತ್ತಿದ್ದು ಈ ವೇಳೆ ಬೈಕ್ ಮೇಲೆ ಬಂದ ಅಪರಿಚಿತ ಯುವಕನನೊಬ್ಬ ಯುವತಿಯ ಕೈ ಹಿಡಿದು ಎಳೆದಾಡಿ ಅಸಭ್ಯ ವರ್ತಿಸಿದ್ದಾನೆ ಎನ್ನಲಾಗಿದೆ. ಯುವತಿ ಕೂಗಾಟ ನೆಡೆಸಿದ್ದಾಳೆ. ಕೂಗಾಟ ಕೇಳಿ ಅಲ್ಲಿಯ ಗ್ರಾಮಸ್ಥರು ಸ್ಥಳಕ್ಕೆ ಓಡಿ ಬರುತ್ತಿರುವದನ್ನು ಕಂಡು ಯುವಕ ಸ್ಥಳದಿಂದ ಬೈಕ್ ಬಿಟ್ಟುಕೊಂಡು ಪರಾರಿಯಾಗಿದ್ದಾನೆ.
ಘಟನೆ ನಡೆದಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಇದೀಗ ಪರಿಶೀಲನೆ ನಡೆಸುತ್ತಿದ್ದಾರೆ…
ಯುವಕನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು
ಶಿರಸಿ ತಾಲೂಕಿನ ಆನಗೋಡಕೊಪ್ಪದ ರಸ್ತೆಯಲ್ಲಿ ಯುವತಿಗೆ ಕೈಹಿಡಿದು ಎಳೆದು ಗ್ರಾಮಸ್ಥರನ್ನು ಕಂಡು ಬೈಕ್ ಬಿಟ್ಟು ಓಡಿ ಹೋಗಿದ್ದ ಹಾವೇರಿ ಮೂಲದ ಕಾಮುಕನನ್ನು ಗ್ರಾಮಸ್ಥರೇ ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ. ಈ ಆರೋಪಿ ಗಾವಡಿ ಕೆಲಸಕ್ಕೆಂದು ಬಾಳೆಕೊಪ್ಪಕ್ಕೆ ಬಂದ ಸಂದರ್ಭದಲ್ಲಿ ಈ ಕೃತ್ಯ ಎಸಗಿ ಓಡಿ ಹೋಗಿದ್ದ.ಪೋಲಿಸರು ಈತನನ್ನು ತನಿಖೆಗೆ ಒಳಪಡಿಸಿದ್ದಾರೆ.
ಗಮನಿಸಿ