ಸುದ್ದಿಬಿಂದು ಬ್ಯೂರೋ ವರದಿ
ಹಾವೇರಿ: ಹೃದಯಾಘಾತದಿಂದ ಮಗ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ ತಂದೆ ಸಹ ಕೆಲ ಗಂಟೆಯಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯಬಸವೇಶ್ವರ ನಗರದದಲ್ಲಿ ನಡೆದಿದೆ.
ಅಪ್ಪ ಹಾಗೂ ಮಗ ಇಬ್ಬರೂ ಸಹ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಮಗ ಡಾ.ವಿನಯ ಗುಂಡಗಾವಿ ಎದೆ ನೋವು ಕಾಣಿಸಿಕೊಂಡು ಸಾವನ್ನಪ್ಪಿದ್ದಾನೆ. ಹೃದಯಾಘಾತದಿಂದಾಗಿ ಮಗ ಸಾವನ್ನಪ್ಪಿದ್ದಾನೆ ಎನ್ನುವ ಸುದ್ದಿ ಕೇಳುತ್ತಿದ್ದಂತೆ ತಂದೆ ಡಾ.ವೀರಭದ್ರಪ್ಪ ಸಹ ಹೃದಯಾಘಾತ ಉಂಟಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮಗ ಡಾ.ವಿನಯ ಹುಬ್ಬಳ್ಳಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಮಗನ ಸಾವಿನ ಸುದ್ದಿ ತಿಳಿದು ನೋಡುವುದಕ್ಕೆ ಅಂತಾ ಆಸ್ಪತ್ರೆಗೆ ಹೋಗಲು ಕಾರು ಹತ್ತುವ ಸಮಯದಲ್ಲಿ ತಂದೆ ಡಾ.ವೀರಭದ್ರಪ್ಪ ಅವರು ಅಲ್ಲೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.ತಂದೆ ಹಾಗೂ ಮಗನನ್ನ ಕಳೆದುಕೊಂಡ ಕುಟುಂಬ ಇದೀಗ ಕಣ್ಣೀರು ಹಾಕುತ್ತಿದ್ದಾರೆ.
ಗಮನಿಸಿ