ಸುದ್ದಿಬಿಂದು ಬ್ಯೂರೋ ವರದಿ
ಮುಂಡಗೋಡ : ಮಳೆಯಿಂದಾಗಿ ತುಂಬಿದ ಕೆರೆ ನೋಡಲು ಹೋಗಿದ್ದ ವೇಳೆ ಕಾಲು ಜಾರಿ ಕೆರೆಯಲ್ಲಿ ಮುಳುಗಡೆಯಾಗಿದ್ದ ಬಾಲಕನ ಶವ ಇಂದು ಬೆಳಿಗ್ಗೆ ಸಾಲಗಾವಿ ಕೆರೆಯಲ್ಲಿ ಪತ್ತೆಯಾಗಿದೆ.
9ನೇ ತರಗತಿ ಓದುತ್ತಿದ್ದ ಪರಶುರಾಮ ಹನ್ಮಂತಪ್ಪ ದುರಮುರ್ಗಿ (15) ಎಂಬಾತ ನಿನ್ನೆ ಮನೆಯಿಂದ ಹೊರಟವನ್ನ ವಾಪಸ್ ಬಂದಿರಲಿಲ್ಲ. ಹೀಗಾಗಿ ಪಾಲಕರು ಬಾಲಕ ನಾಪತ್ತೆ ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು ಬಳಿಕ ಪೊಲೀಸರು ಪತ್ತೆಗಾಗಿ ಶೋಧ ನಡೆಸುವ ವೇಳೆ ಬಾಲಕ ಬಟ್ಟೆ ಸಾಲಗಾವಿ ಕೆರೆ ಬಳಿ ಪತ್ತಯಾಗಿತ್ತು. ಹೀಗಾಗಿ ಬಾಲಕ ಕೆರೆಯಲ್ಲಿಯೇ ಮುಳುಗಡೆ ಆಗಿರಬಹುದು ಎಂದು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿದ ವೇಳೆ ಇಂದು ಬಾಲಕನ ಶವ ಪತ್ತೆಯಾಗಿದೆ.
ಈಗಾಗಲೇ ಮೃತ ಬಾಲಕ ಶವವನ್ನ ಕೆರೆಯಿಂದ ಮೇಲಕ್ಕೆತ್ತಲಾಗಿದ್ದು, ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ಗಮನಿಸಿ