ಬೆಂಗಳೂರು: ಬಿಗ್ ಬಾಸ್(Bigg Boss) 11ನೇ ಸೀಸನ್‌ನಲ್ಲಿ ಬಿಗ್ ಬಾಸ್ ಮನೆ ಸೇರಿಕೊಂಡಿದ್ದ ಲಾಯರ್ ಜಗದೀಶ್ ಅವರು ಅವಾಚ್ಯ ಮಾತುಗಳನ್ನಾಡಿದ್ದಕ್ಕೆ ಅವರನ್ನ ಬಿಗ್ ಬಾಸ್ ಮನೆಯಿಂದ ಹೊರ ಹಾಕಲಾಗಿದೆ. ಇದರ ಬೆನ್ನಲೆ ಚೈತ್ರಾ ಕುಂದಾಪುರ ಅವರಿಗೆ ಕಿಚ್ಚ ಸುದೀಪ್ ಹಿಗ್ಗಾ ಮುಗ್ಗ ಕ್ಲಾಸ್ ತೆಗದುಕೊಂಡಿದ್ದು,ಇದಕ್ಕೆ ಇದೀಗ ಚೈತ್ರಾ ಕಿಚ್ಚಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಲಾಯರ್ ಜಗದೀಶ್(Lawyer Jagadish) ಅವಾಚ್ಯ ಶಬ್ಧಗಳನ್ನ ಬಳಿಸಿದ್ದಾರೆ ಎನ್ನುವ ಕಾರಣಕ್ಕೆ ಜಗದೀಶ್ ಅವರನ್ನ ಹೊರಹಾಕಲಾಗಿದೆ. ಚೈತ್ರಾ ಸಹ ಅವಾಚ್ಯ ಪದಗಳನ್ನ ಬಳಕೆ ಮಾಡಿದ್ದಾರೆ. ಯಾಕೆ ಇನ್ನೂ ಅವರನ್ನ ಮನೆಯಲ್ಲಿ ಇಟ್ಟಕೊಳ್ಳಲಾಗಿದೆ..ಅಂತಾ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ಈ ನಡವೆ ಕಿಚ್ಚಾ ಸುದೀಪ್ ಚೈತ್ರಾ ಕುಂದಾಪುರ ಸೇರಿ ಮನೆಯಲ್ಲಿದ್ದವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.ನೀವು ಆಡುವ ಮಾತುಗಳನ್ನ ಕರ್ನಾಟಕದ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಒಬ್ಬರು ಅವಾಚ್ಯ ಪದಗಳಿಂದ ಮಾತನಾಡಿದರೆ ಇನ್ನೂ ಕೆಲವರು ಚಪ್ಪಲಿ ಬಿಸಾಕುವ ಕೆಲಸ ಮಾಡುತ್ತಿದ್ದೀರಾ.ಯಾರಿಗೂ ಸಂಸ್ಕೃತಿ ಇಲ್ಲವಾ ಎಂದು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಲಾಯರ್ ಜಗದೀಶ್ ಹೆಣ್ಣುಮಕ್ಕಳ ಕುರಿತಾಗಿ ಕೆಟ್ಟ ಪದಗಳಿಂದ ಮಾತನಾಡಿದ್ದೀರಾ ಅಂತಾ ಹೇಳತ್ತಿರಲ್ಲ. ಒಬ್ಬ ಅಪ್ಪನಿಗೆ ಹುಟ್ಟಿದವರಲ್ಲ ಅಂದರೆ ಅದರ ಮಾತಿನ ಅರ್ಥ ಏನು, ನೀವು ಆಡಿದ ಮಾತು ತಾಯಿಗೂ ಬೈದ್ದ ಹಾಗೇ ಅಲ್ವಾ.? ನೀವು ಒಬ್ಬರು ಹೆಣ್ಣು ಅನ್ನೊಂದು ಮರೆಯಬಾರದು. ಆದರೆ ಜಗದೀಶ ಅವರು ಹೇಳಿದ್ದು ಸರಿ ಅಂತಾ ನಾನು ಅವರ ಪರ ಇದ್ದೇನೆ ಅಂತಲ್ಲ..ಇದರಲ್ಲಿ ಇಬ್ಬರ ತಪ್ಪು ಇದೆ.ಒಬ್ಬ ಅಪ್ಪನಿಗೆ ಹುಟ್ಟಿದ್ದರೆ ಎದುರಿಗೆ ಬಂದು ಮಾತನಾಡಿಲಿ ಎಂದು ಚೈತ್ರಾ ಕುಂದಾಪುರ ಹೇಳಿರುವ ಮಾತಿಗೆ ಕಿಚ್ಚ ಸುದೀಪ್ ಖಡಕ್ಕಾಗಿ ಮಾತ್ನಾಡಿದ್ದಾರೆ.
ಸುದೀಪ್ ಕ್ಲಾಸ್ ತೆಗೆದುಕೊಂಡ ಬಗ್ಗೆ ಚೈತ್ರಾ ಕುಂದಾಪುರ(chaitra kundapura) ಸುದೀಪ‌್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಸುದೀಪ್ ಅವರ ಜಗದೀಶ ಅವರ ಆಡಿರುವ ಬಗ್ಗೆ ಹೆಚ್ಚಿಗೆ ಒತ್ತು ನೀಡದೆ ಮನೆಯಲ್ಲಿದ್ದವರ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದು, ಸರಿಯಲ್ಲ ಎಂದು ಚೀತ್ರಾ ಇದೀಗ ಬಿಗ್ ಬಾಸ್ ಮನೆಯೊಳಗೆ ಗೊಣಗುತ್ತಿದ್ದಾರೆ.
ಗಮನಿಸಿ