ಸುದ್ದಿಬಿಂದು ಬ್ಯೂರೋ
ಕಾರವಾರ: ಉತ್ತರಕನ್ನಡ (Uttarkannada) ಜಿಲ್ಲೆಯ ಕಾರವಾರ ನಗರದ ಸೇಂಟ್ ಮೈಕಲ್ ಶಾಲೆಯಲ್ಲಿ(St. Michael’s School) ಡೊನೇಷನ್ ಕಟ್ಟಿಲ್ಲ ಎಂದು ವಿದ್ಯಾರ್ಥಿಗಳನ್ನ ಅಮಾನವೀಯವಾಗಿ ನಡೆಸಿಕೊಂಡ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ರೇಣುಕಾ ರಾಯ್ಕರ್ ಭೇಟಿ ನೀಡಿ ಪರಿಶೀಲನೆ ನಡೆದಿದರು.
ಶಾಲೆಯ ಮುಖ್ಯಶಿಕ್ಷಕಿ ಹಾಗೂ ಸಿಬ್ಬಂದಿ ಮಾತ್ರವಲ್ಲದೇ ಕೊಠಡಿಯ ಹೊರಗೆ ಕೂರಿಸಲಾದ ಮಕ್ಕಳ ಪಾಲಕರಿಂದ ಪ್ರತ್ಯೇಕವಾಗಿ ಮಾಹಿತಿ ಪಡೆದುಕೊಂಡರು.ಈ ವೇಳೆ ಶಾಲೆಗೆ ತಡವಾಗಿ ಬಂದ ಹಾಗೂ ಪ್ರಾರ್ಥನೆ ವೇಳೆ ಗಲಾಟೆ ಮಾಡಿದ್ದಕ್ಕಾಗಿ ಮಕ್ಕಳನ್ನ ಕೊಠಡಿಯ ಹೊರಗೆ ಕೂರಿಸಿದ್ದಾಗಿ ತಿಳಿಸಿದ್ದು ಫೀಸ್ ಕಟ್ಟಲು ಒತ್ತಾಯ ಹೇರಿದ ಆರೋಪವನ್ನ ನ್ಯಾಯಮೂರ್ತಿ ರೇಣುಕಾ ರಾಯ್ಕರ್ ನಿರಾಕರಿಸಿದ್ದಾರೆ.
ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾಲೆಯ ಮುಖ್ಯಶಿಕ್ಷಕರು ಸೇಂಟ್ ಮೈಕಲ್ ಕಾನ್ವೆಂಟ್ ಖಾಸಗಿ ಶಾಲೆಯಾಗಿದ್ದು ಹೈಸ್ಕೂಲ್ ಮಾತ್ರ ಸರ್ಕಾರಿ ಅನುದಾನವನ್ನ ಹೊಂದಿದೆ. ಯಾರೋ ದುರುದ್ದೇಶದಿಂದ ಶಾಲೆಯ ವಿರುದ್ಧ ಅಪಪ್ರಚಾರ ಮಾಡಿದ್ದು ಫೋಟೋ ವೈರಲ್ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋದಾಗಿ ಹೇಳಿಕೆ ನೀಡಿದ್ದಾರೆ.
ಫೀಸ್ ತುಂಬದ ನೆಪದಲ್ಲಿ ಮಕ್ಕಳನ್ನ ಅಮಾನವೀಯವಾಗಿ ನಡೆಸಿಕೊಂಡಿದ್ದಾಗಿ ಯಾರೋ ಕೆಲವರು ಶಾಲೆಯ ಹೆಸರು ಕೆಡಿಸುವ ಉದ್ದೇಶದಿಂದಲೇ ಫೋಟೋ ವೈರಲ್ ಮಾಡಿದ್ದಾಗಿ ಶಾಲೆಯವರು ಹೇಳುತ್ತಿದ್ದಾರೆ.