ಸುದ್ದಿಬಿಂದು ಬ್ಯೂರೋ
ಕಾರವಾರ : ಈ ಬಾರಿಯ ವಿಧಾನಸಭಾ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಆನಂದ ಅಸ್ನೋಟಿಕರ್ ಪ್ರಕಟಣೆ ಮೂಲಕ ತಿಳಿಸುವ ಮೂಲಕ ಎಲ್ಲಾ ಊಹಾಪೋಹಗಳಿಗೂ ಆನಂದ ಈಗ ತೆರೆ ಎಳೆದಿದ್ದಾರೆ.
ಆನಂದ ಬಿಜೆಪಿ, ಕಾಂಗ್ರೆಸ್ ಸೇರತ್ತಾರೆ. ಇವೆರಡು ಇಲ್ಲದೆ ಹೋದರೆ ಪಕ್ಷೇತರವಾಗಿ ಸ್ಪರ್ಧೆ ಮಾಡಬುಹುದು ಹೀಗೆ ಅನೇಕ ಚರ್ಚೆಗಳು ನಡೆಯುತ್ತಿದ್ದು, ಅವೆಲ್ಲದಕ್ಕೂ ಈಗ ಆನಂದ ಅಸ್ನೋಟಿಕರ್ ತೆರೆ ಎಳೆದಿದ್ದು, ಈ ಭಾರಿಯ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಆನಂದ ಅಸ್ನೋಟಿಕರ್ ತಿಳಿಸಿದ್ದಾರೆ.
ಕಳೆದ ಬಾರಿ ಜೆಡಿಎಸ್ ನಿಂದ ಲೋಕಸಭೆ, ವಿಧಾನಸಭೆಗೆ ಸ್ಪರ್ಧಿಸಿದ್ದರು. 2008ರಲ್ಲಿ ಕಾಂಗ್ರೆಸ್ ನಿಂದ ಗದ್ದು ಶಾಸಕರಾಗಿದ್ದ ಆನಂದ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿ ಮಂತ್ರಿಯಾಗಿದ್ದರು.ನಂತರ ನಡೆದ ಎರಡು ಚುನಾವಣೆಯಲ್ಲಿ ಸೋಲುವಂತಾಗಿದೆ. ಈ ಬಾರಿ ಸಹ ಮತ್ತೆ ಸೋಲಾಗಬಾರದು, ತಡವಾಗಿ ರಾಜಕೀಯಕ್ಕೆ ಬಂದಿರುವುದು ಹಿನ್ನಡೆಯಾಗಿದೆ ಎಂದು ಚುನಾವಣಾ ಕಣದಿಂದ ಹಿಂದೆ ಸರೆದಿದ್ದು, ಪಕ್ಷೇತರವಾಗಿ ಕಣಕ್ಕೆ ಇಳಿಯುವ ಸಿದ್ದತೆಯನ್ನ ಸಹ ಮಾಡಿಕೊಂಡಿದ್ದರು.