ಸುದ್ದಿಬಿಂದು ಬ್ಯೂರೋ
ಗೋಕರ್ಣ : ದಕ್ಷಿಣ‌ಕಾಶಿ ಎಂದೆ ಪ್ರಸಿದ್ದಿಯಾಗಿರುವ ಶಿವನ ಕ್ಷೇತ್ರ ಗೋಕರ್ಣದ ಫಾರ್ಮ್ ಹೌಸ್ ಒಂದರಲ್ಲಿ ವ್ಯೆಶ್ಯಾವಾಟಿಕೆ(prostitution) ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಮೂವರು ಯುವತಿಯರನ್ನ ರಕ್ಷಣೆ ಮಾಡಿರುವ ಘಟನೆ ಉತ್ತರಕನ್ನಡ( Utarakannda) ಜಿಲ್ಲೆಯ ಗೋಕರ್ಣದಲ್ಲಿ(Gokarna)ನಡೆದಿದೆ.
.

ಗೋಕರ್ಣದ ಕಾಮತ್‌ ಫಾರ್ಮಹೌಸ್ (Kamath Farm House)ಒಂದರಲ್ಲಿ ವ್ಯೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎನ್ನುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಿಪಿಐ ವಸಂತ ಆಚಾರಿ ಅವರ ನೇತೃತ್ವದ ಪೊಲೀಸ‌ರ ತಂಡ ಮೂವರು ಯುವತಿಯನ್ನ ರಕ್ಷಣೆ ಮಾಡಿದ್ದಾರೆ. ಮೈಸೂರಿನ ಓರ್ವ ಯುವತಿ ಹಾಗೂ ಚಿತ್ರದುರ್ಗದ ಇಬ್ಬರೂ ಯುವತಿಯರನ್ನ ರಕ್ಷಣೆ ಮಾಡಲಾಗಿದೆ.

ಇನ್ನೂ ಮೈಸೂರು ಹಾಗೂ ಚಿತ್ರದುರ್ಗದಿಂದ ಯುವತಿಯನ್ನ ಕರೆತಂದಿದ್ದ ಪತಿ, ಪತ್ನಿ ಹಾಗೂ ಸ್ಥಳೀಯ ಓರ್ವ ವ್ಯಕ್ತಿ ಸೇರಿ ಮೂವರನ್ನ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಸಹ ವೈಶ್ಯಾವಾಟಿಕೆ ದಂಧೆ. ಪ್ರಕರಣದಲ್ಲಿ ಕಾಮತ್ ಪಾರ್ಮ್ ಹೌಸ್ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ಫಾರ್ಮಹೌಸ್ ಸಚಿನ್ ಎಂಬುವವರು ನಡೆಸುತ್ತಿದ್ದಾರೆ ಎನ್ನಲಾಗಿದೆ.ದಾಳಿಯ ವೇಳೆಯಲ್ಲಿ ಒಂದು ಇನೋವಾ ಕಾರು ವಶಕ್ಕೆ ಪಡೆಯಲಾಗಿದೆ.

ಈ ಫಾರ್ಮಹೌಸ ಉದ್ಯಮಿ ವಾಸು ಕಾಮತ್ ಅವರಿಗೆ ಸೇರಿದ್ದಾಗಿದ್ದು, ಇದನ್ನ ಸಚಿನ್ ಆಚಾರಿ ಎಂಬುವವರು ನಡೆಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ