ಸುದ್ದಿಬಿಂದು ಬ್ಯೂರೋ
ಮುಂಡಗೋಡ : ಚರಂಡಿ ದುರ್ವಾಸನೆಯಿಂದಾಗಿ ವಿದ್ಯಾರ್ಥಿಗಳಿಗೆ ಪಾಠ ಕೇಳಲಾಗದೆ.ಕೊಠಡಿ ಬಿಟ್ಟು ಹೊರಗಡೆ ಶಾಲಾ ಆವಾರಣದಲ್ಲಿ ಪಾಠ ಕಲಿಯುತ್ತಿರುವ ಪರಿಸ್ಥಿತಿ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದ ಹಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಂಟಾಗಿದೆ..

ಶಾಲಾ ಪಕ್ಕದಲ್ಲಿ ಗಟಾರವಿದ್ದು ಅದರಲ್ಲಿ ತುಂಬಿರುವ ತ್ಯಾಜ್ಯ ಮುಂದೆ ಸಾಗದೇ, ದುರ್ವಾಸನೆಗೆ ಬರುತ್ತಿದ್ದು, ಇದರಿಂದಾಗಿ ಅಲ್ಲಿನ ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದು ಕೊಠಡಿಯ ಒಳಗೆ ದುರ್ನಾತ ಬರುತ್ತಿದ್ದು ಇದರಿಂದಗಾಗಿ ವಿದ್ಯಾರ್ಥಿಗಳು ಶಾಲೆಯ ಹೊರಗಡೆ ಕುಳಿತು ಪಾಠ ಕಲಿಯುತ್ತಿದ್ದಾರೆ‌. ಇದರಿಂದಾಗಿ ವಿದ್ಯಾರ್ಥಿಗಳ ಆರೋಗ್ಯದ ಮೇಲು ಸಹ ದುಷ್ಪರಿಣಾಮ ಉಂಟಾಗ ಬಹುದಾಗಿದೆ.ಈ ಶಾಲೆಯಲ್ಲಿ 1ರಿಂದ 7ನೇ ತರಗತಿವಿದ್ದು ಒಟ್ಟು 120 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಕೆಟ್ಟ ವಾಸನೆಗೆ ತರಗತಿ ಕೊಠಡಿಯಲ್ಲಿ ಕುಳಿತು ಪಾಠ ಕೇಳಲು ವಿದ್ಯಾರ್ಥಿಗಳ ಹಿಂಜರಿಯುತ್ತಿದ್ದಾರೆ.

ತರಗತಿ ಕೊಠಡಿಯಲ್ಲಿ ದುರ್ನಾತ ಬೀರುತ್ತಿರುವುದರಿಂದ ಬಹುತೇಕ ವಿದ್ಯಾರ್ಥಿಗಳು ಶಾಲೆಗೆ ಗೈರಾಗುತ್ತಿದ್ದಾರೆ‌.ಈ ಬಗ್ಗೆ ಪಟ್ಟಣ ಪಂಚಾಯಿತಿಯವರಿಗೆ ತಿಳಿಸದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಚರಂಡಿ ಸ್ವಚ್ಛಗೊಳಿಸಲು ಪಟ್ಟಣ ಪಂಚಾಯತದವರು ಮೀನಮೇಷ ಮಾಡುತ್ತಿದ್ದಾರೆ.ಈ ಶಾಲೆಯಲ್ಲಿ. ಶಿಕ್ಷಣ ಮಟ್ಟ ಉತ್ತಮವಾಗಿದ್ದರೂ, ಶಾಲಾ ವಾತಾವರಣ ಮಾತ್ರ ಸರಿಯಾಗಿಲ್ಲ‌. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಶಾಲೆಯಲ್ಲಿರುವ ಮಕ್ಕಳ ಸಂಖ್ಯೆ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಸಹ ಇದೆ.