ಸುದ್ದಿಬಿಂದು ಬ್ಯೂರೋ
ಕಾರವಾರ :ಉತ್ತರಕನ್ನಡ ಜಿಲ್ಲೆಯಲ್ಲಿ ಡಿಸೆಂಬರ್ 10ಕ್ಕೆ ಕರೋನಾ ರೂಪಾಂತರಿ(Corona variant)ಒಂದು ವೈರಸ್ ಪ್ರಕರಣ ಪತ್ತೆಯಾಗಿತ್ತು.ಸದ್ಯ ಆ ವ್ಯಕ್ತಿ ಪೂರ್ತಿ ಗುಣ ಮುಖನಾಗಿದ್ದಾನೆ. ಕೆಲಸಕ್ಕೆಂದು ಗೋವಾಕ್ಕೆ ಹೋಗಿ ಬಂದ ವ್ಯಕ್ತಿಯಲ್ಲಿ ಕೊವಿಡ್ ಕಾಣಿಸಿಕೊಂಡಿತು.ಜಿಲ್ಲೆಯಲ್ಲಿ ಯಾರೂ ಕೂಡ ಹೆದರುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ನಿರಜ್ ಬಿ ತಿಳಿಸಿದ್ದಾರೆ.

ಸರಕಾರದ ಇಲಾಖೆಯ ಹೊಸ ಗೈಡ್ ಲೈನ್ಸ್ ಪ್ರಕಾರ ನಾವು ರೆಡಿ ಆಗಿದ್ದೆವೆ.ಕೊವಿಡ್ ಸೆಂಟರ್ ಹಾಗೂ ಆಕ್ಸಿಜನ್ ಪ್ಲ್ಯಾಂಟ್ ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದೆವೆ.

ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಿಲ್ಲ
ಉತ್ತರಕನ್ನಡ ಜಿಲ್ಲೆಗೆ ಬರುವ ಪ್ರವಾಸಿಗರಿಗಾಗಲಿ ಅಥವಾ ಹೊಸ ವರ್ಷಾ ಆಚರಣೆಗೆ ಜಿಲ್ಲೆಗೆ ಬರುವವರಿಗೆ ಸದ್ಯ ಯಾವುದೇ ನಿರ್ಬಂಧ ಹೇರಿಲ್ಲ. ವೈರಸ್ ತಿವ್ರತೆ ಹೆಚ್ಚಾಗಿ ಕಂಡು ಬಂದಲ್ಲಿ ನಿರ್ಬಂಧ ಹೆರಬೇಕಾಗುತ್ತದೆ.ಸದ್ಯ ಉತ್ತರ ಕನ್ನಡ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಯಾವುದೇ ನಿರ್ಬಂಧ ಇಲ್ಲ. ಪ್ರವಾಸಿಗರು ಕೊವಿಡ್ ಬಗ್ಗೆ ಯಾವುದೇ ಆತಂಕ ಬೇಡ ಎಚ್ಚರಿಕೆ ಇರಲಿ ಎಂದಿದ್ದಾರೆ.ಇನ್ನೂ ಹಾರ್ಟ್, ಅಸ್ತಮಾ ಸಮಸ್ಯೆ ಇರುವವರು ಪ್ರವಾಸಕ್ಕೆ ಬರದೆ ಇರೊದು ಒಳ್ಳೆಯದು. ಕೊರೊನಾ ಸಂಖ್ಯೆ ಹೆಚ್ಚಾದರೆ ಗೋವಾ ಬಾರ್ಡರ್ ನಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಾಬೇಕಾಗುತ್ತದೆ ಎಂದರು.