ಸುದ್ದಿಬಿಂದು ಬ್ಯೂರೋ
ಯಲ್ಲಾಪುರ : ಪ್ರವಾಸಿಗರನ್ನ ಕರೆದೊಯ್ದುತ್ತಿದ್ದ(Tourist bus accident) ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಹೊಡೆದು ಚಾಲಕ ಸ್ಥಳದಲ್ಲೇ ಮೃತಪಟ್ಟು, ಪ್ರವಾಸಿಗರು ಗಾಯಗೊಡಿರುವ ಘಟನೆ ಅರಬೈಲ್ ಹೆದ್ದಾರಿಯಲ್ಲಿ ನಡೆದಿದೆ.

ಹೊಸ ವರ್ಷದ ಆಚರಣೆಗಾಗಿ ಹೈದರಾಬಾದ್ ನಿಂದ ಗೋಕರ್ಣಕ್ಕೆ ಪ್ರವಾಸಿಗರು ಬಂದಿದ್ದು, ಹೊಸ ವರ್ಷ ಆಚರಣೆ ಮುಗಿಸಿ ವಾಪಸ್ ಹೈದ್ರಾಬಾದ್ ಗೆ(Hyderabad)ತೆರಳುತ್ತಿದ್ದ ವೇಳೆ ಅರಬೈಲ್ ಸಮೀಪ ಹೋಗುತ್ತಿದ್ದ ವೇಳೆ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಇದರಿಂದ ಬಸ್ ಹೆದ್ದಾರಿ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಚಾಲಕ ಸ್ಥಳದಲ್ಲೇ ಮೃಪಟ್ಟಿದ್ದಾನೆ‌‌.

ಇನ್ನೂ ಬಸ್ ನಲ್ಲಿದ್ದ ಪ್ರಯಾಣಿಕರಿಗೂ ಸಹ ಗಾಯವಾಗಿದ್ದು, ತಕ್ಷಣ ಅವರನ್ನ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಲಾಗಿದ್ದು, ಗಂಭೀರವಾಗಿ ಗಾಯಗೊಂಡವನ್ನ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನೂ ಅಪಘಾತದ ಸ್ಥಳಕ್ಕೆ ಯಲ್ಲಾಪುರ ಪಿಎಸ್ ಐ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.