ಸುದ್ದಿಬಿಂದು ಬ್ಯೂರೋ
ಯಲ್ಲಾಪುರ : ಜಮೀನಿನ ಗಡಿಗುರುತು(ಹದ್ದಬಸ್ತ) ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ಸರ್ವೆ ಅಫೀಸರ್ ಓರ್ವ ಲಂಚ‌ ಪಡೆಯುತ್ತಿರುವಾಗಲೇ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಪಟ್ಟಣದ ತಹಶೀಲ್ದಾರ ಕಚೇರಿ ಪಕ್ಕದಲ್ಲೇ ನಡೆದಿದೆ.

ಧೀರಜ್ ತಿನೇಕರ್ ಎಂಬುವವರು ತಮ್ಮ ಜಮೀನಿನ ಸರ್ವೆ ಮಾಡಿಲು ಸರ್ವೆ ಅಧಿಕಾರಿಗೆ ಕೆಲ ದಿನಗಳ ಹಿಂದೆ ಅರ್ಜಿ ಸಲ್ಲಿಸಿದರು. ಆದರೆ ಅರ್ಜಿ ಸಲ್ಲಿಸಿದರು ಸಹ ಸರ್ವೆ ಮಾಡದೆ ಇರುವ ಬಗ್ಗೆ ಧೀರಜ್ ಕಚೇರಿಗೆ ಸಾಕಷ್ಟು ಬಾರಿ ಅಲೆದಾಟ ಮಾಡಿದ್ದಾರೆ.ಕೊನೆಗೆ ಸರ್ವೆ ಅಧಿಕಾರಿ ಚಂದ್ರಮೋಹನ್ ಧೀರಜ್ ಅವರ ಬಳಿ 2500ರೂ ರೂಪಾಯಿ ಬೇಡಿಕೆ ಇಟ್ಟಿದ್ದರು.

ಸರ್ವೆ ಮಾಡಲು ಚಂದ್ರಮೋಹನ್ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಧೀರಜ್ ತಿನೇಕರ್ ಅವರು ಕಾರವಾರ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರು. ಇಂದು ಧೀರಜ್ ಅವರು ಚಂದ್ರಮೋಹನ್ ಅವರಿಗೆ ಹಣ ಕೊಡುತ್ತವೇಳೆ ಲೋಕಾಯುಕ್ತ ಅಧಿಕಾರಿ ವಿನಾಯಕ ಬಿಲ್ಲವ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಆರೋಪಿಯನ್ನ ವಶಕ್ಕೆ ಪಡೆಯಲಾಗಿದೆ.