ಸುದ್ದಿಬಿಂದು ಬ್ಯೂರೋ
ಕಾರವಾರ: ಶ್ರೀರಾಮ ಭಕ್ತರ ಮೇಲೆ ನಕಲಿ ಕೇಸ್ ಹಾಕಲಾಗಿದೆ ಎಂದು ವಿರೋಧಿಸಿ ಬಿಜೆಪಿ ಉತ್ತರಕನ್ನಡ ಜಿಲ್ಲಾ ಬಿಜೆಪಿಯಿಂದ ಕಾರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕಾರವಾರ ನಗರದ ಸುಭಾಷ್‍ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿಗರು ರಾಜ್ಯದಲ್ಲ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ 31ವರ್ಷದ ಹಿಂದಿನ ಪ್ರಕರಣವನ್ನ ಅನಾವಶ್ಯಕವಾಗಿ ಕೆದಕಿದ್ದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿಗರು ಕಾಂಗ್ರೆಸ್ ಹಿಂದೂಗಳ ವಿರೋಧ ಸರಕಾರವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲ್ಲೆಲ್ಲಾ ಹಿಂದೂಗಳನ್ನ ವಿರೋಧ ಮಾಡುತ್ತಲೆ ಬಂದಿದ್ದಾರೆ‌.ಈಗ ಸಹ ಅದನ್ನೆ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ‌ಹಿಂದೂ ವಿರೋಧಿ ಸರಕಾರ ಎಂದು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯಲ್ಲಿ,ಕುಮಟಾ ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕ ಸುನೀಲ್ ಹೆಗಡೆ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಸೇರಿ ಮೊದಲಾದವರು ಪತ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.