ಸುದ್ದಿಬಿಂದು ಬ್ಯೂರೋ
ಕುಮಟಾ :
ಕಾಂಗ್ರೆಸ್ ಈಗಾಗಲೆ ಅಭ್ಯರ್ಥಿಗಳ ಎರಡನೆ ಪಟ್ಟಿಯನ್ನ ಬಿಡುಗಡೆಗೊಳಸಿದ್ದು, ಜಿಲ್ಲೆಯ ಕುಮಟಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾರೆನ್ನುವುದನ್ನ ಇನ್ನೂ ಘೋಷಣೆ ಮಾಡಿಲ್ಲ. ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಮಂಜುನಾಥ ನಾಯ್ಕ ಪರ ದೆಹಲಿ ಮಟ್ಟದಲ್ಲಿ ಜೋರಾಗಿ ಕಸರತ್ತು ನಡೆಯುತ್ತಿದೆ.

ಕುಮಟಾ ಕಾಂಗ್ರೆಸ್ ಟಿಕೆಟ್ ಗಾಗಿ ಆರಂಭದಿಂದಲ್ಲೂ ಭಾರೀ ಪೈಪೋಟಿ ನಡೆಯುತ್ತಲೆ ಬಂದಿದೆ. ಟಿಕೆಟ್ ಗಾಗಿ 13ಆಕಾಂಕ್ಷಿಗಳು ಹೈಕಮಾಂಡಗೆ ಅರ್ಜಿ ಸಲ್ಲಿಸಿದ್ದರು.ಆದರೆ ಇವರೆಲ್ಲರನ್ನ ಬಿಟ್ಟು ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಪುತ್ರ ನಿವೇದಿತಾ ಆಳ್ವಾ ಅವರಿಗೆ ಕುಮಟಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಬಹುತೇಕ ಪಕ್ಕಾ ಎನ್ನುವ ಬಗ್ಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಇದರಿಂದಾಗಿ ಇದರಿಂದಾಗಿ ಅಸಮಧಾನಕ್ಕೆ ಒಳಗಾಗಿರುವ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಯಾವ ಕಾರಣಕ್ಕೂ ನಿವೇದಿತಾ ಆಳ್ವಾ ಅವರಿಗೆ ಟಿಕೆಟ್ ನೀಡದಂತೆ ಅಸಮಧಾನ ಹೊರ ಹಾಕಿದ್ದರು‌.ಇದು ಕಾಂಗ್ರೆಸ್ ಹೈಕಮಾಂಡಗೂ ಸಹ ಸಾಕಷ್ಟು ತಲೆ ನೋವಿಗೆ ಕಾರಣವಾಯತ್ತು.

ಈ ಕಾರಣಕ್ಕಾಗಿ ಎರಡನೇ ಪಟ್ಟಿಯಲ್ಲೆ ಕುಮಟಾ ಕ್ಷೇತ್ರದ ಅಭ್ಯರ್ಥಿ ಘೋಷಣೆ ಆಗಬೇಕಿತ್ತು. ಆದರೆ ಕಾರ್ಯಕರ್ತರ ಅಸಮಧಾನದಿಂದಾಗಿ ಸದ್ಯ ಟಿಕೆಟ್ ಘೋಷಣೆ ಮಾಡದೆ ಹಾಗೆ ಉಳಿಸಿಕೊಳ್ಳಲಾಗಿದೆ..

ಇವೆಲ್ಲದರ ನಡುವೆ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದ ಮಂಜುನಾಥ ಎಲ್ ನಾಯ್ಕ ಅವರ ಹೆಸರು ದೆಹಲಿ ಮಟ್ಟದಲ್ಲಿ ಮುನ್ನೆಲೆಗೆ ಬರುವಂತಾಗಿದೆ.ಇವರಿಗೆ ಟಿಕೆಟ್ ನೀಡಬೇಕು ಎಂದು ಮಂಜುನಾಥ ನಾಯ್ಕ ಅವರ ಸ್ನೇಹಿತನಾಗಿರುವ ಲೋಹಿತ್ ನಾಯ್ಕ ಕಳೆದ ಮೂರನಾಲ್ಕು ದಿನಗಳಿಂದ ದೆಹಲಿಯಲ್ಲಿ ಮಂಜುನಾಥ ನಾಯ್ಮ ಅವರಿಗೆ ಟಿಕೇಟ್ ನೀಡಬೇಕು ಎನ್ನುವ ಬಗ್ಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿರುವ ಬಿ ಕೆ ಹರಿಪ್ರಸಾದ ಅವರ ಮೂಲಕ ಪ್ರಯತ್ನ ಮುಂದುವರೆಸಿದ್ದಾರೆ ಎನ್ನಲಾಗಿದೆ.

ಲೋಹಿತ್ ನಾಯ್ಕ ಅವರು ರಾಜ್ಯ ಆರ್ಯ ಈಡಿಗ ಸಂಘದ ನಿಕಟ ವರ್ತಿಯಾಗಿದ್ದು, ಈಗಾಗಲೇ ಈಡಿಗ ಸಂಘದ ರಾಜ್ಯಾಧ್ಯಕ್ಷರನ್ನ ಭೇಟಿ ಮಾಡಿರುವ ಲೋಹಿತ್ ನಾಯ್ಕ ಮಂಜುನಾಥ ನಾಯ್ಕ ಅವರಿಗೆ ಟಿಕೆಟ್ ದೊರಕಿಸಿಕೊಡಲು ಬೆಂಬಲ ನೀಡುವಂತೆ ತಿಳಿಸಿದ್ದು, ಇನ್ನೂ ಕೆಪಿಸಿಸಿ ಅಧ್ಯಕ್ಷ ರಾಗಿರುವ ಡಿ ಕೆ ಶಿವಕುಮಾರ ಅವರನ್ನ ಸಹ ಭೇಟಿ ಮಾಡಿ ಮಂಜುನಾಥ ನಾಯ್ಕ ಅವರಿಗೆ ಟಿಕೆಟ್ ನೀಡುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ‌..