ಕುಮಟಾ : ಕಾಂಗ್ರೆಸ್ ನಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದ ಶಿವಾನಂದ ಹೆಗಡೆಗೆ ‘ಕೈ’ ಟಿಕೆಟ್ ಮಿಸ್ ಅಗಿರುವ ಹಿನ್ನಲೆಯಲ್ಲಿ ಈಗ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಗಿಯಾಗಿ ಕಣಕ್ಕಿಳಿಯಲ್ಲಿದ್ದು ಏ.20ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಶಿವಾನಂದ ಹೆಗಡೆ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷದ ಪ್ರಮುಖರಲ್ಲಿ ಒಬ್ಬರೆನಿಸಿಕೊಂಡು, ಪಕ್ಷ ಸಂಘಟನೆ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕ್ಷೇತ್ರದಲ್ಕಿ ಸಾಕಷ್ಟು ಅಭಿಮಾನಿಗಳನ್ನ ಹೊಂದಿದ್ದು, ಇವರು ಎಲ್ಲಾ ವರ್ಗದ ಜನರನ್ನ ಸಮಾನವಾಗಿ ನೋಡುವಗುಣವನ್ನ ಹೊಂದಿರುವುದು ಇವರಿಗೆ ಶ್ರೀರಕ್ಷೆಯಾಗಿದೆ. ಇವರು ಕಳೆದ ಎರಡು ದಶಕಗಳಿಂದ ಪಕ್ಷದ ವಿವಿಧ ಸಂಘಟನೆಯಲ್ಲಿ ಕೆಲಸಮಾಡುವ ಮೂಲಕ ಪಕ್ಷವನ್ನ ತಳಮಟ್ಟದಿಂದ ಸಂಘಟನೆ ಮಾಡಿಕೊಂಡು ಬಂದಿದ್ದಾರೆ.ಹೀಗಾಗಿ ಎಲ್ಲಾ ವರ್ಗದ ಜನರು ಇವರನ್ನ ಇಷ್ಟ ಪಡುತ್ತಾ ಬಂದಿದ್ದಾರೆ.
ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ಕೆಲಸ ಮಾಡಿಕೊಂಡು ಬಂದರು ಸಹ ಈ ಬಾರಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದೆ. ಇದರಿಂದ ಅಸಮಧಾನಕ್ಕೆ ಒಳಗಾದ ಇವರು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತಕ್ಷಣ ರಾಜೀನಾಮೆ ಸಲ್ಲಿಸಿದ್ದಾರೆ.
ಕ್ಷೇತ್ರದ ಮತದಾರರ ಒತ್ತಾಯದ ಮೇಲೆ ಇವರು ಈ ಬಾರಿ ಕಾಂಗ್ರೇಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ.ಈಗಾಲೆ ಶಿವಾನಂದ ಹೆಗಡೆ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ. ಕ್ಷೇತ್ರದಲ್ಲಿ ಇವರ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದ್ದು,ಕ್ಷೇತ್ರಾದ್ಯಂತ ಅವರ ಅಭಿಮಾನಿಗಳು ಅವರ ಗೆಲುವಿಗಾಗಿ ಶ್ರಮಿಸಲು ತುದಿಗಾಲ ಮೇಲೆ ನಿಂತಿದ್ದಾರೆ.