ಬೆಂಗಳೂರು : ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಕ್ಕಿಯನ್ನು ನೀಡಲು ಭಾರತೀಯ ಆಹಾರ ನಿಗಮ (ಎಫ್‌ಸಿಐ) ಒಪ್ಪಿಗೆ ನೀಡಿದ್ದು, ಈ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರದ ನೀಡುತ್ತಿದ್ದ 5 ಕೆಜಿ ಅಕ್ಕಿ ಹಣ ಇನ್ನು ಮುಂದೆ ಫಲಾನುಭವಿಗಳಿಗೆ ಸಿಗುವುದು ಬಹುತೇಕ ಬಂದ್ ಆಗಲಿದೆ. ಹಣದ ಬದಲಿಗೆ ಅಕ್ಕಿ ನೀಡಲು ಸರ್ಕಾರ ಮುಂದಾಗುತ್ತಿದೆ
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಬಂದ ಸಂದರ್ಭದಲ್ಲಿ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಬೇಕೆಂದು ರಾಜ್ಯ ಸರಕಾರ ಕೇಂದ್ರದ ಬಳಿ ಒತ್ತಾಯ ಮಾಡಿತ್ತು. ಆದರೆ ಅಂದು ಕೇಂದ್ರ ಅಕ್ಕಿ ಪೊರೈಕೆ ಮಾಡದ ಕಾರಣ ರಾಜ್ಯ ಸರಕಾರದ ಆ ಐದು ಕೆಜಿ ಬದಲಿಗೆ ಅದರ ಹಣವನ್ನ ಫಲಾನುಭವಿಗಳ ಖಾತೆಗೆ ನೀಡುತ್ತಾ ಬಂದಿದೆ. ತಲಾ ಒಂದು ಕೆಜಿಗೆ 34 ರೂಪಾಯಿಯಂತೆ 170 ರೂಪಾಯಿ ಖಾತೆ ನೀಡುತ್ತಿದೆ.
ಇದನ್ನೂ ಓದಿ
- ಐದು ನಿಮೀಷದಲ್ಲಿ 241 ಸಾವು ಓರ್ವ ಬಚಾವ್
- ವಿಮಾನ ದುರಂತದಲ್ಲಿ ಬದುಕುಳಿದ ಓರ್ವ ಪ್ರಯಾಣಿಕ
- ನಾಳೆಯೂ ಶಾಲೆಗಳಿಗೆ ರಜೆ ಘೋಷಣೆ
ಈಬಗ್ಗೆ ಪ್ರತಿಕ್ರಿಯೆ ನೀಡಿರುವ ಎಫ್‌ಸಿಐನ ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕ ಮಹೇಶ್ವರಪ್ಪ ಬಿ ಒ ಅವರು, ಕರ್ನಾಟಕ ಸರ್ಕಾರ ಅನ್ನಭಾಗ್ಯ ಯೋಜನೆಗಾಗಿ 2.38 ಲಕ್ಷ ಟನ್ ಅಕ್ಕಿಯನ್ನು ಪೂರೈಸಲು ಮನವಿ ಮಾಡಿದ್ದು, ಅದನ್ನು ಪೂರೈಸಲು ನಾವು ಸಿದ್ಧರಿದ್ದೇವೆಂದು ಹೇಳಿದ್ದಾರೆ. ಹೀಗಾಗಿ ರಾಜ್ಯ ಸರಕಾರ ನೀಡುತ್ತಿರುವ 5ಕೆ ಜಿ ಅಕ್ಕಿ ಜೊತೆಗೆ ಇನ್ನೂ ಕೇಂದ್ರಸರಕಾರದಿಂದ ಐದು ಕೆ ಜಿ ಅಕ್ಕಿ ಸೇರಿಸಿ ಓರ್ವ ಫಲಾನುಭವಿಗೆ ತಲಾ ಹತ್ತು ಕೆಜಿ ಅಕ್ಕಿ ಸಿಗುವ ಸಾಧ್ಯತೆ ಇದೆ.