suddibindu.in
ಹೊನ್ನಾವರ : ತಾಲೂಕಿನ ಕರ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಎದುರಿನಲ್ಲಿನ ರಾಷ್ಟ್ರೀಯ ಹೆದ್ದಾರಿ 66 ರ ಕನ್ನಡ ಶಾಲೆಯ ಎದುರಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಹೆದ್ದಾರಿಯ ಒಂದು ಪಕ್ಕದಲ್ಲಿ ಹಿಂದಿನಿಂದಲೂ ಪ್ರಯಾಣಿಕರ ತಂಗುದಾಣದ ಕಟ್ಟಡವಿತ್ತು, ಚತುಷ್ಪತ ಕಾಮಗಾರಿಗಾಗಿ ಕಾಮಗಾರಿ ಗುತ್ತಿಗೆ ಪಡೆದ ಐ. ಆರ್. ಬಿ. ಕಂಪನಿಯು ಅದನ್ನು ಕೆಡವುದರ ಜೊತೆಗೆ, ರಸ್ತೆಯ ಎರಡೂ ಬದಿಗಳಲ್ಲಿದ್ದ ನೆರಳು ಕೊಡುವ ಮರಗಳನ್ನು ಸಹ ಕಡಿದು ನೆಲಸಮಗೊಳಿಸಿ ಅವೈಜ್ಞಾನಿಕ ಚತುಷ್ಪತ ರಸ್ತೆಯನ್ನು ಈಗಾಗಲೇ ಇಲ್ಲಿ ನಿರ್ಮಿಸಿದ್ದು ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ.

ಬೇಸಿಗೆಯಲ್ಲಿ ಅನೇಕ ಬಾರಿ ಬಸ್, ಟೆಂಪೋ ಗಳಿಗಾಗಿ ಕಾದು ಕುಳಿತ ಮಹಿಳೆಯರು, ಕಾಲೇಜ್ ವಿದ್ಯಾರ್ಥಿನಿಯರು ಬೇಸಿಗೆಯಲ್ಲಿ ಬಿಸಿಲಿನ ತಾಪ ತಾಳಲಾಗದೇ ತಲೆ ಸುತ್ತು ಬಂದು ಬಿದ್ದಂತ ಅನೇಕ ನಿದರ್ಶನಗಳು ಇಲ್ಲಿ ನಡೆದಿದೆ. ಹೀಗಿದ್ದರೂ ಸಹ, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ, ಸಾರ್ವಜನಿಕರ ಹಿತದ್ರಷ್ಠಿಯಿಂದ ಇಲ್ಲಿ ಬಸ್ ತಂಗುದಾಣ ನಿರ್ಮಿಸುವ ಕೆಲಸ ತಮ್ಮ ಪಂಚಾಯತ್ ಸೇರಿದಂತೆ ಸಂಬಂಧ ಪಟ್ಟ ಯಾರೂ ಈ ವರೆಗೂ ಮನಸ್ಸು ಮಾಡಿಲ್ಲ

ಸಮಸ್ಯೆಗಳಿಗೆ ತಾವುಗಳು ಸ್ಪಂದಿಸದೇ ಇರುವುದರಿಂದ, ನಾವಿಲ್ಲಿ ಲಿಖಿತವಾಗಿ ಸ್ಪಷ್ಟವಾಗಿ ಬರೆದು ಕೊಂಡು ತಮಗಿಂದು ಮನವಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಮತ್ತು ಅದು ನಮ್ಮ ಕರ್ತವ್ಯವು ಸಹ ಆಗಿರುವುದರಿಂದ ಆದಷ್ಟು ಸಣ್ಣದಾಗಿ ಸಂಕ್ಷಿಪ್ತವಾಗಿ ಇಲ್ಲಿನ ಸಮಸ್ಯೆಗಳ ಚಿತ್ರಣವನ್ನು ತಮ್ಮ ಮನ ಮುಟ್ಟುವ ನಿಟ್ಟಿನಲ್ಲಿ ಬರೆದು ತಮಗೆ ನೀಡಿ ತಮ್ಮ ಮೂಲಕ ಪರಿಹರಿಸಿ ಕೊಳ್ಳಲು ಈ ಸಣ್ಣ ಪ್ರಯತ್ನಕ್ಕೆ ನಾವು ಮುಂದಾಗಿದ್ದೇವೆ.

ಆದರಿಂದ, ಮಳೆ, ಬಿಸಿಲು, ಗಾಳಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ, ದುಡಿಮೆಗಳಿಗೆ ಹೋಗುವ ಶ್ರಮೀಕರಿಗೆ ಹಾಗೂ ಇನ್ನಿತರ ಪ್ರಯಾಣಿಕರಿಗೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ (ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಎದುರಿನ )ಎರಡೂ ಬದಿಗಳಲ್ಲಿ ಕನಿಷ್ಠ 10 ಅಡಿ ಉದ್ದ, 7 ಅಡಿ ಅಗಲದ, ಬೀರು ಬಿಸಿಲಿಗೂ ಕರಗದ, ಅದರೊಳಗೆ ಕುಳಿತವರು ಬೆವರದ, ಧೋ ಎಂದು ಸುರಿಯುವ ಮಳೆ-ಬಿರುಗಾಳಿಗೂ ಅಲುಗಾಡದಂತ ಗಟ್ಟುಮುಟ್ಟಿನ ಬಸ್ ತಂಗುದಾಣವನ್ನು ಆದಷ್ಟು ಬೇಗ ನಿರ್ಮಿಸಿ ಕೊಡಬೇಕೆಂದು ತಮ್ಮಲ್ಲಿ ನನ್ನ ಸಾಮಾಜಿಕ ಕಳಕಳಿಯ ಹಾಗೂ ವಿದ್ಯಾರ್ಥಿಗಳ- ಸಾರ್ವಜನಿಕರ ವಿನಃಮ್ರ ವಿನಂತಿಯಾಗಿದೆ.

ಇಲ್ಲಿನ ಎರಡೂ ಬದಿಗಳಲ್ಲಿ ಬಸ್ ತಂಗುದಾಣ ನಿರ್ಮಿಸಿ ಕೊಡುವಂತೆ ಮೊದಲು ಜಿಲ್ಲಾಧಿಕಾರಿಗಳಿಗೆ ವಾಟ್ಸಾಪ್ ದೂರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಲಿಖಿತ ದೂರು, ಹಾಗೂ ಜಿಲ್ಲಾ ಪಂಚಾಯತ್ ಪೋನ್ ದೂರು ಸಲ್ಲಿಸಿದ್ದು ಇರುತ್ತದೆ. ಆದರೂ ಏನು ಪ್ರಯೋಜನ ಆಗಿಲ್ಲ.

ಮನವಿ ಸಲ್ಲಿಸುವ ವೇಳೆ ಶ್ರೀನಿವಾಸ್ ಆನಂತ ಶಾನಭಾಗ. ಆನಂದ್ ಅನಂತ ಶಾನಭಾಗ ಜಿ.ಎಂ. ನಾಯ್ಕ. ಮಂಜುನಾಥ ಗೌಡ. ರಾಘವೇಂದ್ರ ನಂದ ಪೈ. ನಂದಾ ಶ್ರೀಧರ ಪೈ ಶ್ರೀಪಾದ ಕೆ. ಆಚಾರಿ, ಮಂಜುನಾಥ ವೆಂಕಪ್ಪ ನಾಯ್ಕ, ಶಿವು ನಾರಾಯಣ ಮುಕ್ರಿ, ಸುದೀಪ್ ನಾರಾಯಣ ಮುಕ್ರಿ, ಶಿಲ್ಪಾ ಶಾನಭಾಗ್, ಬಾಲು ಜೋಗಿ ಮುಕ್ರಿ, ಮನೋಜ್ ಎಂ.ಮುಕ್ರಿ, ಗಣಪು ದೇವು ಮುಕ್ರಿ, ಶೀಲಾ ಮಹೇಶ ನಾಯ್ಕ,ರಾಯಣ ದೇವು ಮುಕ್ರಿ, ಗಣಪತಿ ಮಹೇಶ್ ನಾಯ್ಕ, ಸೋಮೇಶ್ ಎಂ.ಪೈ, ಪ್ರಭಾಕರ್ ಆಚಾರಿ, ಉಲ್ಲಾಸ ಆರ್. ಪೈ, ದೇವಿ, ವಿವೇಕ್ ಎಂ. ನಾಯ್ಕ, ನರಸಿಂಹ ವಿ. ಭಂಡಾರಕರ್, ಕೃಷ್ಣ ಶ್ರೀಪಾದ ಹೆಗಡೆ, ಚಂದ್ರಕಾಂತ್ ಎನ್. ನಾಯ್ಕ, ವಿಷ್ಣು ಎನ್. ಮುಕ್ರಿ, ನಾಗೇಶ್ ಜಟ್ಟಿ ಮುಕ್ರಿ, ರಶ್ಮಿ ಎಂ. ಮುಕ್ರಿ, ಲಕ್ಷ್ಮೀ ಎನ್ ಮುಕ್ರಿ, ಭಾರತಿ ಜಟ್ಟಿ ಮುಕ್ರಿ, ಗಂಗೆ ಕಣಿಯಾ ಮುಕ್ರಿ, ಜ್ಯೋತಿ ಎನ್. ಮುಕ್ರಿ, ಸಾವಿತ್ರಿ ಎ. ಮುಕ್ರಿ, ಸೌಮ್ಯ ಮಾಸ್ತಿ ಮುಕ್ರಿ, ಗಣಪಿ ಗೋವಿಂದ ಮುಕ್ರಿ, ಮೊದಲಾದವರು ‌ಹಾಜರಿದ್ದರು..