ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ವ್ಯಕ್ತಿ ನಾಪತ್ತೆ
ಹಳಿಯಾಳ: ಕೂಲಿ ಕೆಲಸಕ್ಕೆಂದು ತುಮಕೂರಿಗೆ ದುಡಿಯಲು ಹೋಗಿದ್ದ ಸಂತೋಷ ಸುರೇಶಿ (25) ಮೂರು ತಿಂಗಳು ಕಳೆದರೂ ಮನೆಗೆ ಮರಳಿಲ್ಲ. ಆಘಾತಕ್ಕೆ ಒಳಗಾದ ಮನೆಯವರು ಆತನಿಗಾಗಿ ಹುಡುಕಾಡುತ್ತಿದ್ದಾರೆ. ಬಿಕೆ ಹಳ್ಳಿಯ ಸಂತೋಷ ಇಲ್ಲಿಯೇ ಗೌಂಡಿ ಕೆಲಸ ಮಾಡಿಕೊಂಡಿದ್ದ. ಕಳೆದ ಮಾರ್ಚ್ ನಲ್ಲಿ ಗೌಂಡಿ ಕೆಲಸಕ್ಕಾಗಿ ತುಮಕೂರಿಗೆ ಹೊರಟ ಆತ, ನಂತರ ಯಾರಿಗೂ ಸಿಕ್ಕಿಲ್ಲ. ಆತನ ಸಂಬಂಧಿಕರ ಮನೆಯಲ್ಲಿ ವಿಚಾರಿಸಿದಾಗಲೂ ಸುಳಿವು ಸಿಕ್ಕಿಲ್ಲ.ಹೀಗಾಗಿ ನೊಂದ ಕುಟುಂಬದವರು ಇದೀಗ ಪೊಲೀಸ್ ಮೊರೆ ಹೋಗಿದ್ದಾರೆ.

ಕಾರಿಗೆ ಟ್ರಕ್ ಡಿಕ್ಕಿ : ಬೈಕ್ ಪುಡಿಪುಡಿ
ಶಿರಸಿ :
ಚಲಿಸುತ್ತಿದ್ದ ಕಾರೊಂದಕ್ಕೆ ಟ್ರಲ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿಯಲ್ಲಿ ನಿಲ್ಲಿಸಿಟ್ಟ ಬೈಕ್ ‌ ನುಜ್ಜುಗುಜ್ಜಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ನಗರದ ಡಿಡಿಪಿಐ ಕಚೇರಿ ಎದುರು ನಡೆದಿದೆ. ಟಕ್ರನಲ್ಲಿ ಎಸ್ಎಸ್‌ಎಲ್‌ಸಿ ಪ್ರಶ್ನೆ‌ ಪತ್ರಿಕೆ ಸಾಗಾಟ ಮಾಡಲಾಗುತ್ತಿದ್ದ ಎದುರುಗಡೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿಟ್ಟ ಬೈಕ್‌ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಅಪಘಾತಕ್ಕೆ ಒಳಗಾಗಿರುವ ಕಾರು.ನರೆಂದ್ರ ನೆಜ್ಜೂರ್ ಇವರಿಗೆ ಸೇರಿದ್ದಾಗಿದಗದು ಎಂದು ಗೊತ್ತಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನರೇಗಾ ಯೋಜನೆಗೆ ಮಹತ್ವ ನೀಡಿ : ಡಿ.ಎಫ್.ಓ ಪ್ರಶಾಂತ್ ಕುಮಾರ್

ಕಾರವಾರ,- ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿಗಳು ತಮ್ಮ ಇತರೆ ಕರ್ತವ್ಯಗಳ ಜೊತೆಗೆ ನರೇಗಾ ಯೋಜನೆಯ ಅನುಷ್ಠಾನಕ್ಕೂ ಮಹತ್ವ ನೀಡಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತಕುಮಾರ ಕೆ.ಸಿ ಹೇಳಿದರು.ಮಂಗಳವಾರ ಹಳಿಯಾಳ ತಾಲೂಕಿನ ಅರಣ್ಯ ಇಲಾಖೆಯ ಸಭಾಭವನದಲ್ಲಿ ಜರುಗಿದ ಜೋಯಿಡಾ, ದಾಂಡೇಲಿ ಹಾಗೂ ಹಳಿಯಾಳ ತಾಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ನರೇಗಾ ಯೋಜನೆಯ ಮೂಲಕ ಜನರಿಗೆ ಕೆಲಸ ಒದಗಿಸುವಲ್ಲಿ ಇತರೆ ಇಲಾಖೆಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಅಗತ್ಯವಿರುವ ಸಹಕಾರ ನೀಡಬೇಕು , ಆ ಮೂಲಕ ಉದ್ಯೋಗ ಖಾತರಿಯಲ್ಲಿ ಗರಿಷ್ಟ ಮಟ್ಟದಲ್ಲಿ ಮಾನವ ದಿನಗಳ ಸೃಜನೆ ಆಗಲು ನೆರವಾಗಬೇಕು ಎಂದರು.

ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಕರೀಂ ಅಸದಿ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಮೂಲತಃ ಗ್ರಾಮೀಣ ಭಾಗದ ಜನರ ಜೀವನಮಟ್ಟ ಸುಧಾರಿಸಲು ಇರುವ ಯೋಜನೆಯಾಗಿದ್ದು, ಜನರಿಗೆ ನಿರಂತರ ಕೆಲಸ ಒದಗಿಸಲು ಅರಣ್ಯ ಇಲಾಖೆಯು ಸಹಕಾರ ನೀಡಬೇಕು. ಹಾಗೂ ಗ್ರಾಮ ಪಂಚಾಯತಿಗಳೊAದಿಗೆ ಸಮನ್ವಯ ಸಾಧಿಸಿ ಪ್ರಗತಿ ಸಾಧಿಸಬೇಕು. ವಲಯ ಅರಣ್ಯಾಧಿಕಾರಿಗಳು ಯೋಜನೆ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ತಾಲೂಕು ಪಂಚಾಯತನಲ್ಲಿ ನಡೆಯುವ ಕಾರ್ಯಗಾರಗಳಿಗೆ ಹಾಜರಾಗಿ ಒದಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಕಾಳಿ ಹುಲಿ ಸಂರಕ್ಷಣಾ ಪ್ರದೇಶದ ನಿರ್ದೇಶಕ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ್ ಶಿಂಧೆ, ಸಾಮಾಜಿಕ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ, ಹಳಿಯಾಳ- ದಾಂಡೇಲಿ ತಾಲೂಕ ಪಂಚಾಯತನ ಕಾರ್ಯ ನಿರ್ವಹಣಾಧಿಕಾರಿ ಪರಶುರಾಮ ಎಂ ಘಸ್ತೆ, ಜೋಯಿಡಾ ತಾಲೂಕ ಪಂಚಾಯತನ ಕಾರ್ಯ ನಿರ್ವಹಣಾಧಿಕಾರಿ ಆನಂದಕುಮಾರ ಬಡಕುಂದ್ರಿ, ಹಳಿಯಾಳ ಜೋಯಿಡಾ ದಾಂಡೇಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಹಳಿಯಾಳ ಜೋಯಿಡಾ ದಾಂಡೇಲಿ ಸಹಾಯಕ ನಿರ್ದೇಶಕರು(ಗ್ರಾಉ) ವಲಯ ಅರಣ್ಯಾಧಿಕಾರಿಗಳು, ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿಗಳು, ಹಳಿಯಾಳ, ದಾಂಡೇಲಿ, ಜೋಯಿಡಾ ತಾಲೂಕಿನ ನರೇಗಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ
ಕಾರವಾರ
:ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ ಪೊಲೀಸ್ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ(ರಿ), ಬಾಲಮಂದಿರ ಹೈಸ್ಕೂಲ್ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಬಾಲಮಂದಿರ ಹೈಸ್ಕೂಲ್(ಹಿಂದೂ ಹೈಸ್ಕೂಲ್) ಸಭಾಂಗಣದಲ್ಲಿ ಜೂನ್ 12 ರಂದು ಬೆಳಗ್ಗೆ 10.30 ಗಂಟೆಗೆ ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಯಣ್ಣ ಬಿ.ಎಲ್ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಜಿಲ್ಲಾ ಪಂಚಾಯತ ಸಿಇಒ ಈಶ್ವರ ಕುಮಾರ ಕಾಂದೂ ಮತ್ತಿತರರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಬಾಲಮಂದಿರ ಹೈಸ್ಕೂಲ್ ವರೆಗೆ ಜಾಥಾ ನಡೆಯಲಿದೆ.

ವಿದ್ಯುತ್ ವ್ಯತ್ಯಯ
ಕಾರವಾರ
,:- ಕುಮಟಾದ ಉಪ ವಿಭಾಗದ 110/33/11 ಕೆ.ವಿ ಕೆ.ಪಿ.ಟಿ.ಸಿ.ಎಲ್ ಗ್ರಿಡ್‌ನಲ್ಲಿ ಪರಿವರ್ತಕ-1 ರಲ್ಲಿ ನಿರ್ವಹಣಾ ಕಾಮಗಾರಿ ಇರುವುದರಿಂದ ಜೂ.12 ರಂದು ಬೆಳಗ್ಗೆ 9:30 ಗಂಟೆಯಿAದ ಮಧ್ಯಾಹ್ನ 3ಗಂಟೆವರೆಗೆ ವಾಲಗಳ್ಳಿ, ಕತಗಾಲ, ಮಿರ್ಜಾನ ಹಾಗೂ ಹೆಗಡೆ ಫೀಡರಿನ ಎಲ್ಲಾ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.ಕುಮಟಾ ಉಪ-ವಿಭಾಗದನಗರ ಶಾಖೆಯ ಎಲ್ಲ ಫೀಡರಿನ (ಕುಮಟಾ ಟೌನ, ಇಂಡಸ್ಟಿçಯಲ ಮತ್ತು ಚಿತ್ರಗಿ ಫೀಡರ) ಎಲ್ಲ ಭಾಗಗಳಲ್ಲಿ ಮತ್ತು 33/11 ಕೆ.ವಿ ಮರಾಕಲ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಇರುವುದರಿಂದ ಸಂತೆಗುಳಿ, ಕಲ್ಲಬ್ಬೆ, ಹೊದ್ಕೆ-ಶಿರೂರು, ಕೂಜಳ್ಳಿ, ಉಳ್ಳೂರುಮಠ ಹಾಗೂ ಮೂರುರು ಫೀಡರಿನ ವ್ಯಾಪ್ತಿಯ ಎಲ್ಲಾ ಭಾಗಗಳಲ್ಲಿ ಬೆಳಗ್ಗೆ 9:30 ಗಂಟೆಯಿAದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು(ವಿ), ಕೆ.ಪಿ.ಟಿ.ಸಿ.ಎಲ್. ಹಾಗೂ ಹೆಸ್ಕಾಂ, ಕುಮಟಾ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಚಿತ ಭಾರಿ ಮತ್ತು ಲಘು ವಾಹನ ಚಾಲನಾ ತರಬೇತಿ
ಕಾರವಾರ
: 2023-24ನೇ ಸಾಲಿನ SಅSP/ಖಿSP ಯೋಜನೆಯಡಿಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಅರ್ಹ ಫಲಾನುಭವಿಗಳಿಗೆ ಭಾರಿ ಮತ್ತು ಲಘು ವಾಹನ ಚಾಲನಾ ತರಬೇತಿಯನ್ನು ಪ್ರಾದೇಶಿಕ ತರಬೇತಿ ಕೇಂದ್ರ, ಗೋಕುಲ ರಸ್ತೆ, ಹುಬ್ಬಳ್ಳಿಯಲ್ಲಿ ಉಚಿತವಾಗಿ ವಸತಿ ಸಹಿತ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ತರಬೇತಿ ಕೇಂದ್ರದ ದೂರವಾಣಿ ಸಂಖ್ಯೆ: 0836-2332128/ 9449925367/ 9449971416/7996865758 ನ್ನು ಸಂಪರ್ಕಿಸುವAತೆ ಪ್ರಾಂಶುಪಾಲರು, ಪ್ರಾದೇಶಿಕ ತರಬೇತಿ ಕೇಂದ್ರ, ಹುಬ್ಬಳ್ಳಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2ನೇ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ
ಕಾರವಾರ,:
ಸರ್ಕಾರಿ ಪಾಲಿಟೆಕ್ನಿಕ್, ಸಾಲಗಾಂವ, ಮುಂಡಗೋಡ ಸಂಸ್ಥೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿಗೆ 2 ವರ್ಷಗಳ ಐಟಿಐ/ದ್ವಿತೀಯ ಪಿ.ಯು.ಸಿ (ವಿಜ್ಞಾನ) ದ್ವಿತೀಯ ಪಿ.ಯು.ಸಿ.(ತಾಂತ್ರಿಕ ವಿಷಯಗಳು) ಉತ್ತೀರ್ಣ ಹೊಂದಿದ ಅರ್ಹ ಅಭ್ಯರ್ಥಿಗಳಿಗೆ ಲ್ಯಾಟ್ರಲ್ ಎಂಟ್ರಿ ಸ್ಕೀಂ ಮುಖಾಂತರ 2ನೇ ವರ್ಷದ 3ನೇ ಸೆಮಿಸ್ಟರ್ ಡಿಪ್ಲೋಮಾ ಕೋರ್ಸಿಗೆ ಆಫ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಪ್ರವೇಶ ಬಯಸುವ ಅರ್ಹ ಅಭ್ಯರ್ಥಿಗಳು ತಮ್ಮ ಎಲ್ಲ ಮೂಲ ದಾಖಲೆಗಳೊಂದಿಗೆ ಜೂನ್ 27 ರೊಳಗಾಗಿ ಖುದ್ದಾಗಿ ಹಾಜರಾಗಿ, ಪ್ರಾಚಾರ್ಯರ ಹಂತದಲ್ಲಿ ನೇರವಾಗಿ ಅರ್ಜಿ ಸಲ್ಲಿಸಿ, ಪ್ರವೇಶ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ,ಸಂ:-08301-222304/295304 ಪ್ರಾಚಾರ್ಯರು, 9964515482 ಇವರನ್ನು ಸಂಪರ್ಕಿಸುವAತೆ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಂಗ ತರಬೇತಿ ಕೋರ್ಸ್ಗೆ ಅರ್ಜಿ ಆಹ್ವಾನ
ಕಾರವಾರ :-
ಮೈಸೂರಿನ ರಂಗಾಯಣ ರೆಪರ್ಟರಿ ಸಂಸ್ಥೆಯಿAದ 2024-25ನೇ ಸಾಲಿಗೆ ರಂಗಶಿಕ್ಷಣದ 10 ತಿಂಗಳ ರಂಗ ತರಬೇತಿ ಡಿಪ್ಲೋಮಾ ಕೋರ್ಸ್ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ರಂಗಭೂಮಿಯ ಪ್ರಾಥಮಿಕ ಅನುಭವ ಹೊಂದಿರಬೇಕು. ಕನಿಷ್ಠ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ವಯೋಮಿತಿ ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕಡೆಯ ದಿನಾಂಕಕ್ಕೆ 18 ವರ್ಷಗಳು ತುಂಬಿದ ಮತ್ತು 28 ವರ್ಷಗಳು ತುಂಬಿರದ ಅಭ್ಯರ್ಥಿಗಳಾಗಿರಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಮತ್ತು ಮಾಹೆಯಾನ ರೂ.5000 ವಿದ್ಯಾರ್ಥಿ ವೇತನ ಪಾವತಿಸಲಾಗುತ್ತದೆ.ಭಾರತೀಯ ರಂಗಶಿಕ್ಷಣ ಕೇಂದ್ರಕ್ಕೆ ಸೇರಬಯಸುವ ವಿದ್ಯಾರ್ಥಿಗಳು ರಂಗಾಯಣದ ವೆಬ್‌ಸೈಟ್ http://rangayanamysore.karnataka.gov.in ನಲ್ಲಿ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಅಥವಾ ರಂಗಾಯಣದ ಕಚೇರಿ ಅವಧಿಯಲ್ಲಿ ಖುದ್ದಾಗಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಹಾಗೂ ಅರ್ಜಿಯ ಶುಲ್ಕ ಸಾಮಾನ್ಯ ವರ್ಗ ರೂ.230, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.180 ( ರಂಗಕೈಪಿಡಿ ಶುಲ್ಕ ರೂ.30 ಒಳಗೊಂಡAತೆ) ಡಿಡಿ ಯನ್ನು ಉಪ ನಿರ್ದೇಶಕರು, ರಂಗಾಯಣ, ಮೈಸೂರು ಇವರ ಹೆಸರಿನಲ್ಲಿ ಪಡೆದು ಜೂನ್ 20 ರ ಸಂಜೆ 5.30ರೊಳಗೆ ತಲುಪುವಂತೆ ಅಂಚೆ ಮೂಲಕ ಕಳುಹಿಸಬಹುದಾಗಿದೆ. ಸಂದರ್ಶನದ ದಿನಾಂಕವನ್ನು ಅಭ್ಯರ್ಥಿಗಳಿಗೆ ಪತ್ರ ಮುಖೇನ ತಿಳಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂ: 0821-2512639, 9148827720 ನ್ನು ಸಂಪರ್ಕಿಸಬಹುದಾಗಿದೆ ಎಂದು ರಂಗಾಯಣದ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆತ್ಮ ಯೋಜನೆಯಡಿ ಸಿಬ್ಬಂದಿ ನೇಮಕಾತಿಗೆ ಅರ್ಜಿ ಆಹ್ವಾನ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಪ್ರಸಕ್ತ ಸಾಲಿನ ಆತ್ಮ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಉಪ ಯೋಜನಾ ನಿರ್ದೇಶಕರು ಹಾಗೂ ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಆರ್ಜಿ ಆಹ್ವಾನಿಸಲಾಗಿದೆ.ಕೃಷಿ ಅಥವಾ ಕೃಷಿ ಸಂಬAಧಿತ ವಿಷಯದಲ್ಲಿ ಪದವಿ/ ಸ್ನಾತಕೋತ್ತರ ಪದವಿ ಪಡೆದ ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವ-ವಿವರದೊಂದಿಗೆ ಅರ್ಜಿಯನ್ನು ಜೂನ್ 24 ರೊಳಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕಾರವಾರ ಇಲ್ಲಿ ಸಲ್ಲಿಸಬಹುದಾಗಿದೆ. ಮಾರ್ಗಸೂಚಿ, ಷರತ್ತುಗಳು ಮತ್ತು ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕಾರವಾರ ದೂ.ಸಂ: 8884023050 ಅಥವಾ ಇ ಮೇಲ್ ವಿಳಾಸ: [email protected] ನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೈಗಾದಲ್ಲಿ ಇಂಜಿನಿಯರ್ ನಾಪತ್ತೆ
ಕಾರವಾರ
: ಕೈಗಾ ದ ಇಸಿಐಎಲ್ ನಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಾಯಿ ಪ್ರಶಾಂತ (27ವರ್ಷ), ಸಾ: ಆಂಧ್ರಪ್ರದೇಶ ಹಾಲಿ ಚರ್ಚವಾಡಾ, ಮಲ್ಲಾಪುರ ಇವರು ದಿನಾಂಕ:05-06-2024 ರಂದು ಸಂಜೆ ಯಾರಿಗೂ ಹೇಳದೆ ಕೇಳದೇ ಮರಳಿ ಬಾರದೇ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾನೆ. ಕಾಣೆಯಾದ ಪುರುಷನ ಚಹರೆ: ಉದ್ದನೆಯ ಮುಖ, ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು 5.4 ಅಡಿ ಎತ್ತರ, ತೆಲಗು, ಇಂಗ್ಲೀಷ್ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ. ನೀಲಿ ಬಣ್ಣದ ಟಿ ಶರ್ಟ್, ತಲೆಗೆ ಕ್ಯಾಪ್ ಧರಿಸಿರುತ್ತಾನೆ. ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಮಲ್ಲಾಪುರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08382-254812, ಪಿಎಸ್‌ಐ ಮಲ್ಲಾಪುರ ಮೊ.ಸಂ: 9480805249, ಕದ್ರಾ ಪೊಲೀಸ್ ವೃತ್ತ ನಿರೀಕ್ಷಕರ ದೂ.ಸಂ: 08382-256200, 9480805231, ಉತ್ತರ ಕನ್ನಡ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ ದೂ.ಸಂ: 08382-226306, 226307 ನ್ನು ಸಂಪರ್ಕಿಸುವAತೆ ಮಲ್ಲಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಓಸಿ ಮಟ್ಕಾ ಓರ್ವ ಅಂದರ್
ಕುಮಟಾ
: ಮೂರೂರು ಹಟ್ಟಿಕೇರೆಯ ಶಿವಾನಂದ ನಾಯ್ಕ ಎಂಬಾತ ಓಸಿ ಆಡಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಆತನನ್ನು ಜೈಲಿಗೆ ಅಟ್ಟಲಾಗಿದೆ.ಸಾರ್ವಜನಿಕರಿಂದ ಹಣ ಪಡೆದ ಈತ ರಾಜಾರೋಷವಾಗಿ ಓಸಿ ಆಡಿಸುತ್ತಿದ್ದ. ಅಂಕಿಗಳ ಮೇಲೆ ಹಣ ಹೂಡುತ್ತಿರುವ ವೇಳೆ ದಾಳಿ ಮಾಡಿದ ಪೊಲೀಸರು ಹಣದ ಸಮೇತ ಆತನನ್ನು ವಶಕ್ಕೆ ಪಡೆದರು.

ಸರಾಯಿ ನಶೆಯಲ್ಲಿ ವಿಷ ಕುಡಿದ !
ಹೊನ್ನಾವರ: ದೋಣಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಶ್ರೀಧರ ನಾಯ್ಕ (48) ಎಂಬಾತ ಸರಾಯಿ ಎಂದು ವಿಷ ಕುಡಿದು ಸಾವನಪ್ಪಿದ್ದಾನೆ.ಮಾವಿನಹೊಳೆಯ ಉಪ್ಪೋಣಿಯವನಾಗಿದ್ದ ಶ್ರೀಧರ ನಾಯ್ಕ ಮುರುಡೇಶ್ವರದ ದೇವಗಿರಿಯಲ್ಲಿ ಸರಾಯಿ ಕುಡಿದಿದ್ದ. ಇದೇ ನಶೆಯಲ್ಲಿ ವಿಷವನ್ನು ಸೇವಿಸಿದ್ದು, ನಂತರ ಆತನನ್ನು ಆರ್ ಎನ್ ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆತ ಅಲ್ಲಿಯೇ ಕೊನೆಉಸಿರೆಳಿದಿದ್ದಾನೆ.

ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಕಾರವಾರ: ಸರ್ಕಾರಿ ಕಾಲೇಜಿನಲ್ಲಿ ಓದುತ್ತಿದ್ದ ಪಾರಿಯಾ ಶೇಖ್ ಎಂಬಾಕೆ ಆತ್ಮಹತ್ಯೆಗೆ ಶರಣಾಗಿದ್ದು, ಈ ಸಾವಿಗೆ ಆಕೆಯ ಪ್ರಿಯತಮನೇ ಕಾರಣ ಎಂದು ಪಾರಿಯಾಳ ಪಾಲಕರು ದೂರಿದ್ದಾರೆ. ಮುದ್ದು ಮುದ್ದಾಗಿದ್ದ ಪಾರಿಯಾ ಚಲುವಿಗೆ ಮಾರು ಹೋಗಿದ್ದ ಬಿಲಾಲ್ ಮೊಮಿನಿ ಪ್ರೀತಿಸುವಂತೆ ಆಕೆಯ ಹಿಂದೆ ಬಿದ್ದಿದ್ದ.ಆತನ ಪ್ರಯತ್ನಕ್ಕೆ ಮನಸೋತಿದ್ದ ಪಾರಿಯಾ ಬಿಲಾಲ್ ಮೊಮಿನಿಯನ್ನೇ ಮದುವೆ ಆಗಲು ನಿರ್ಧರಿಸಿದ್ದಳು.ಈ ಬಗ್ಗೆ ಕುಟುಂಬದಲ್ಲಿ ಸಹ ಒಪ್ಪಿಗೆ ದೊರೆತಿತ್ತು.ಆದರೆ, ಬಿಲಾಲ್ ಮೊಮಿನಿ ಹಂತ ಹಂತವಾಗಿ ಆಕೆಯನ್ನು ದೂರ ಮಾಡುತ್ತ ಬಂದಿದ್ದ. ಜೊತೆಗೆ ಬೇರೆ ಹುಡುಗಿಯ ಜೊತೆ ತಿರುಗಾಡುತ್ತಿದ್ದ. ಈ ಬಗ್ಗೆ ಪಾರಿಯಾ ಪ್ರಶ್ನಿಸಿದಾಗ ಆಕೆಯನ್ನು ನಿಂದಿಸಿದ್ದ. `ಎಲ್ಲಾದರೂ ಹೋಗಿ ಸಾಯಿ’ ಎಂದು ಕೂಗಾಡಿದ್ದ. ಇದರಿಂದ ನೊಂದ ಪಾರಿಯಾ ನೇಣು ಬಿಗಿದುಕೊಂಡು ಸಾವನಪ್ಪಿದ್ದು, ಆಕೆಯ ಶವವನ್ನು ಶವಾಗಾರದಲ್ಲಿರಿಸಲಾಗಿದೆ.

ಬೈಕ್ ಅಪಘಾತ ಸವಾರನಿಗೆ ಗಾಯ
ಭಟ್ಕಳ:
ಮುರುಡೇಶ್ವರದಿಂದ ಭಟ್ಕಳಕ್ಕೆ ಸಾಗುವ ನಡುವೆ ನಾಯಿಗಳ ಕಾಟ ಜೋರಾಗಿದೆ.ರಫೀಕ್ ದೊಣ್ಣಾ ಎಂಬಾತರು ನಾಯಿಗಳಿಗೆ ಬೈಕ್ ಗುದ್ದಿ ಗಾಯಗೊಂಡಿದ್ದಾರೆ. ಅವರ ಜೊತೆಯಿದ್ದ ವಾಹೀದ್’ಗೆ ಸಹ ಗಾಯವಾಗಿದೆ. ಮುರುಡೇಶ್ವರದಿಂದ ಭಟ್ಕಳಕ್ಕೆ ತೆರಳುತ್ತಿದ್ದಾಗ ನಾಲ್ಕೆöÊದು ನಾಯಿಗಳು ಅವರ ಸ್ಕೂಟಿಗೆ ಅಡ್ಡ ಬಂದಿದ್ದು, ಸ್ಕೂಟಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ. ಆಗ ಸ್ಕೂಟಿಯಲ್ಲಿದ್ದ ಇಬ್ಬರೂ ಗಾಯಗೊಂಡಿದ್ದಾರೆ.