suddibindu.in
Karwar:ಕಾರವಾರ : ಭಕ್ತರ ಆರಾಧ್ಯದೈವ ಸದಾಶಿವಗಡದಲ್ಲಿ ನೆಲೆಸಿರುವ ಶ್ರೀದುರ್ಗಾದೇವಿ ದೇವಸ್ಥಾನದಲ್ಲಿಂದು ಶಾಸಕ ಸತೀಶ್ ಸೈಲ್,ಪತ್ನಿ ಕಲ್ಪನಾಸೈಲ್ ಹಾಗೂ ಕುಟುಂಬ ಸಮೇತರಾಗಿ ದೇಗುಲಕ್ಕೆ ತೆರಳಿ ವಿಶೇಷವಾದ ಪೂಜೆ ಸಲ್ಲಿಸಿದರು.
ಶಾಸಕ ಸತೀಶ್ ಸೈಲ್ ಅವರು ಈ ಹಿಂದಿನಿಂದಲ್ಲೂ ಸಹ ದುರ್ಗಾದೇವಿಯ ಭಕ್ತರಾಗಿದ್ದಾರೆ.ಅವರು ಪ್ರತಿ ವರ್ಷವೂ ಕೂಡ ಶ್ರಾವಣ ಮಾಸದಲ್ಲಿ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾ ಬಂದಿರುವುದು ವಾಡಿಕೆ. ಅದರಂತೆ ಶ್ರಾವಣ ಮಾಸದ ಶುಭ ಶುಕ್ರವಾರವಾದ ಇಂದು ಸಹ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಶ್ರೀದೇವಿಯ ತೀರ್ಥ, ಪ್ರಸಾದ ಸ್ವೀಕರಿಸಿದರು.
ಇದನ್ನೂ ಓದಿ
- ಕಾರವಾರದಲ್ಲಿ ಚಲಿಸುತ್ತಿದ್ದ ಸ್ಕೂಟಿ ಮೇಲೆ ಮರದ ರೆಂಬೆ ಬಿದ್ದು ಬಾಲಕಿಗೆ ಗಾಯ
- ಹಸುವಿನ ಮೇಲೂ ಕಾಮುಕರ ಕಣ್ಣು.! ಕಾಡಶೆಟ್ಟಿಹಳ್ಳಿಯಲ್ಲಿ ಕೃತ್ಯ
- ವಾಹನ ಸವಾರರಿಗೆ ಎಚ್ಚರಿಕೆ.! ಹೆದ್ದಾರಿ ಎರಡೂ ತಿಂಗಳು ಬಂದ್
ಶ್ರಾವಣ ಮಾಸವಾಗಿರುವ ಕಾರಣ ದೇವಾಲಯಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರೂ ಆಗಮಿಸಿದ್ದರು, ದೇಗುಲಕ್ಕೆ ಬಂದ ಭಕ್ತರ ಎಲ್ಲರಿಗೂ ಶಾಸಕ ಸತೀಶ್ ಸೈಲ್ ಹಾಗೂ ಪತ್ನಿ ಕಲ್ಪನಾಸೈಲ್ ಪ್ರಸಾದ ವಿವರಿಸಿದರು. ಬಳಿಕ ದೇವರಲ್ಲಿ ಪ್ರಾರ್ಥಿಸಿಕೊಂಡ ಶಾಸಕರು, ಕಾಳಿ ನದಿಯ ಸೇತುವೆ ದುರಂತದಲ್ಲಿ ಯಾವುದೇ ಪ್ರಾಣ ಹಾನಿ ಆಗದೆ ಕಾಪಾಡಿರುವುದಕ್ಕೆ ಈ ವೇಳೆ ಭಕ್ತರ ಎದರು ದೇವಿಯನ್ನ ನೆನೆದರು, ಅದೇ ರೀತಿ ಎಲ್ಲರನ್ನೂ ಸದಾ ಸುಖ,ಸಮೃದ್ದಿಯಿಂದ ನೆಮ್ಮದಿಯಿಂದ ಕಾಪಾಡುವಂತೆ ದುರ್ಗಾ ದೇವಿಯಲ್ಲಿ ಕೈಮುಗಿದು ಪ್ರಾರ್ಥಿಸಿಕೊಂಡರು.