ಸುದ್ದಿಬಿಂದು ಬ್ಯೂರೋ
ಶಿರಸಿ : ಹೃದಯಾಘಾತಕ್ಕೆ ಒಳಗಾಗಿ ಕೆಎಸ್ಆರ್‌ಟಿಸಿ(Ksrtc bus) ಬಸ್ ಚಾಲಕ ನೋರ್ವ ಮೃತ ಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ನಗರದ ಹಳೆ‌ ಬಸ್ ನಿಲ್ದಾಣದಲ್ಲಿ ನಡೆದಿದೆ.

ಡಿ ಜಿ ಕಾಟೆಣ್ಣನವರ್ ಮೃತಪಟ್ಟ ಬಸ್ ಚಾಲಕ.ರಾತ್ರಿ ಎಂಟು ಗಂಟೆ ಸುಮಾರಿಗೆ ಮತ್ತಿಘಟ್ಟಾದಿಂದ ಬಸ್ ಚಲಾಯಿಸಿಕೊಂಡು ಬಂದ ಚಾಲಕ ಬಸ್ ನಿಲ್ದಾಣಕ್ಕೆ ಸಂದರ್ಭದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

ಚಾಲಕ.ಕಸ್ತೂರಬಾ ನಗರದ ನಿವಾಸಿಯಾಗದ್ದು, ಇವರು ಸೇವೆಯಿಂದ‌ ನಿವೃತ್ತಿಹೊಂದಿದ್ದರು. ಮತ್ತೆ ವಾಪಸ್ ಗುತ್ತಿಗೆ ಆಧಾರದ ಮೇಲೆ ಸೇವೆಗೆ ಹಾಜರಾಗಿದ್ದು, ಈ ವೇಳೆ‌ ಗುತ್ತಿಗೆ ಸೇವೆಯಲ್ಲಿ ಇರುವಾಗಲೇ ಚಾಲಕ ಮೃತಪಟ್ಟಿದ್ದಾರೆ. ಇವರು ತೀರಾ ಬಡ ಕುಟುಂಬದವರಾಗಿದ್ದು,‌ ಸರಕಾರದ ನೆರವು ಅವಶ್ಯಕವಾಗಿದೆ.