ಸುದ್ದಿಬಿಂದು ಬ್ಯೂರೋ
ಕಾರವಾರ : ರಾತ್ರಿ ವೇಳೆ ರಸ್ತೆ ಬದಿಯಲ್ಲಿದ್ದ ಯುವಕರಿಗೆ ಮನೆಗೆ ಹೋಗುವಂತೆ ಪೊಲೀಸರು ಬುದ್ದಿ ಹೇಳಿದಕ್ಕೆ ಯುವಕರ ಗುಂಪೊಂದು ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ಬೈತಖೋಲ್ ಪ್ರದೇಶದಲ್ಲಿ ನಡದಿದೆ.
ಗಣೇಶ ಕುರಿಯವರ್, ಹರೀಶ ಗವಾಣಿಕರ ಗಾಯಗೊಂಡ ಪೊಲೀಸ್ ಸಿಬ್ಬಂದಿಗಳಾಗಿದ್ದಾರೆ. ಇವರುಗಳು ರಾತ್ರಿವೇಳೆ ಕರ್ತವ್ಯದಲ್ಲಿದ್ದರು. ಆದರೆ ಒಂದಿಷ್ಟು ಮಂದಿ ಯುವಕರು ರಾತ್ರಿಯಾದರೂ ಮನೆಗೆ ತೆರಳದೆ ರಸ್ತೆ ಬದಿಯಲ್ಲಿ ನಿಂದತುಕೊಂಡಿದ್ದರು.ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸರು. ಆ ಯುವಕರಿಗೆ ಮನೆಗೆ ಹೋಗುವಂತೆ ತಿಳಿಸಿದ್ದಾರೆನ್ನಲಾಗಿದೆ.
ಇದೆ ವಿಚಾರಕ್ಕೆ ಸಿಟ್ಟಾದ ಯುವಕರು ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಲ್ಲಿ ಗಾಯಗೊಂಡ ಪೊಲೀಸರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಪ್ರಕರಣಕ್ಕೆ ಬಂಧಿಸಿ, ಸುನೀಲ ಗೌಡ, ಮಂಜುನಾಥ ಗೌಡ, ಸಂದೇಶ್, ರಘುವೀರ, ನಿತಿನ್ ಗೌಡ, ಗಗನ ಗೌಡ, ಅನುರಾಗ ಗೌಡ, ಉಮೇಶ್ ಜನಕಪ್ರಸಾದ್, ವಿತೇಶ ಗೌಡ, ಯುವರಾಜ ಗೌಡ, ಸುಚಿತ ಗೌಡ ಬಂಧಿಸಲಾಗಿದ್ದು ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ..ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.