ಸುದ್ದಿಬಿಂದು ಬ್ಯೂರೋ ವರದಿ
Dandeli:ದಾಂಡೇಲಿ: ನಗರದ ಹಳೆ ದಾಂಡೇಲಿಯ ಕಾಳಿ ನದಿಯ ಸೇತುವೆ ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ,ಕೊಚ್ಚಿಹೋಗುತ್ತಿದ್ದ ಬೆಳಗಾವಿ (belagavi)ಮೂಲದ ಮಹಿಳೆಯನ್ನ ಸ್ಥಳೀಯ ಸಾಹಸಿ ಯುವಕರು ರಕ್ಷಣೆ ಮಾಡಿ ಸುರಕ್ಷಿತವಾಗಿ ದಡಕ್ಕೆ ತಂದು ರಕ್ಷಿಸಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ
ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದ ರೇಖಾ ಬಾಗಡೆ (22) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯಾಗಿದ್ದಾಳೆ.ನದಿಗೆ ಹಾರಿದ ರಭಸಕ್ಕೆ ಕೊಚ್ಚಿ ಹೋಗಿದ್ದ ಮಹಿಳೆ ನದಿಯ ಮಧ್ಯದಲ್ಲಿದ್ದ ಪೊದೆಯಲ್ಲಿ ಸಿಕ್ಕಿ ಜೀವನ್ಮರಣ ಹೋರಾಟದಲ್ಲಿದ್ದಳು. ತಕ್ಷಣ ಸ್ಥಳೀಯ ಯುವಕರಾದ ಅಷ್ಪಾಕ ಸರ್ದಾರ್ ನಾಯಕ, ಇರ್ಷಾದ್ ಖಾನ್ ಮತ್ತು ಬಶೀರ್ ಇಂಗಳಗಿ ನದಿಗೆ ಹಾರಿ ಆಕೆಯನ್ನು ರಕ್ಷಣೆ ಮಾಡಿದ್ದಾರೆ.
ನದಿಗೆ ಹಾರಿದ ಈ ಮಹಿಳೆಯ ಕಾಲಿಗೆ ಗಂಭೀರ ಗಾಯವಾಗಿದ್ದು, ನಗರದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಮನಿಸಿ