suddibindu.in
ಶಿವಮೊಗ್ಗ: ರಾಜ್ಯದಲ್ಲಿ ಝೀಕಾ ವೈರಸ್ ಆತಂಕ ಮೂಡಿಸಿರುವ ಹೊತ್ತಲ್ಲೇ ಮೊದಲ ಬಲಿಯಾಗಿದೆ. ಶಿವಮೊಗ್ಗದಲ್ಲಿ ಝೀಕಾ ವೈರಸ್ಗೆ 73 ವರ್ಷದ ವೃದ್ಧ ಬಲಿಯಾಗಿದ್ದಾರೆ.
ಝೀಕಾ ವೈರಸ್ (Zeika virus)ಲಕ್ಷಣಗಳಿದ್ದ ವೃದ್ಧನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಮತ್ತಿಬ್ಬರು ಗುಣಮುಖರಾಗಿದ್ದಾರೆ. ಶಿವಮೊಗ್ಗ ಸೇರಿದಂತೆ ರಾಜ್ಯದಲ್ಲಿ ಝೀಕಾ ವೈರಸ್ ಭೀತಿ ಎದುರಾಗಿದ್ದು,ರಾಜ್ಯದಲ್ಲಿ ಇದುವರೆಗೆ 9 ಝೀಕಾ ವೈರಸ್ ಕೇಸ್ ಪತ್ತೆ ಆಗಿವೆ.ಬೆಂಗಳೂರಿನ (Bangalore) ಜಿಗಣಿ ಪ್ರದೇಶದಲ್ಲಿ 6, ಶಿವಮೊಗ್ಗ ಜಿಲ್ಲೆಯಲ್ಲಿ 3, ಝೀಕಾ ವೈರಸ್ ಕೇಸ್ ಪತ್ತೆ ಆಗಿವೆ.
ಇದನ್ನೂ ಓದಿ
- Fengal Cyclone:ಫೆಂಗಲ್ ಚಂಡಮಾರುತ ಹಿನ್ನಲೆ : ನಾಳೆ ಶಾಲಾ-ಕಾಲೇಜಿಗೆ ರಜೆ ಘೋಷಿಸಿದ ಡಿಸಿ
- Earthquake Clarification/ಭೂ ಕಂಪನದ ಬಗ್ಗೆ ರಿಕ್ಟರ್ ಮಾಪಕದಲ್ಲಿ ಯಾವುದೇ ದಾಖಲೆ ಇಲ್ಲ
- ಉತ್ತರಕನ್ನಡದಲ್ಲಿ ಕಂಪಿಸಿದ ಭೂಮಿ : ಮನೆ ಬಿಟ್ಟು ಓಡಿದ ಜನ
ಜಿಕಾ ವೈರಸ್ ಗುಣಲಕ್ಷಣಗಳು?
ಜ್ವರ,ತಲೆನೋವು, ಕಣ್ಣು ಕೆಂಪಾಗುವಿಕೆ, ಗಂಧೆಗಳು(ದದ್ದುಗಳು), ಕೀಲು ಮತ್ತು ಸ್ನಾಯುಗಳಲ್ಲಿ ನೋವು ಹಾಗೂ ಇತರೆ ಲಕ್ಷಣಗಳು, ಬಹುತೇಕರಲ್ಲಿ ಜಿಕಾ ರೋಗ ಲಕ್ಷಣಗಳು ಕಂಡುಬರುವುದಿಲ್ಲ. ಸಾಮಾನ್ಯವಾಗಿ ರೋಗದ ಲಕ್ಷಣಗಳು 2-7 ದಿನಗಳವರೆಗೆ ಇರುತ್ತದೆ.