ಸುದ್ದಿಬಿಂದು ಬ್ಯೂರೋ
ಅಂಕೋಲಾ : ದೀಪಾವಳಿ ಹಬ್ಬಕ್ಕೆ ಊರಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದ್ದು, ಎಲ್ಲಾ ಬಸ್ ಗಳು ಭರ್ತಿಯಾಗುತ್ತಿದೆ. ಇದೆ ಸರಿಯಾದ ಸಮಯ ಎಂದು ತಿಳಿದ ಚಾಣಕ್ಯ ಕಳ್ಳರು ಅವರ ಕೆಲಸಕ್ಕೆ ಸಮರ್ಥವಾಗಿ ಈ ಸಮಯವನ್ನ ಬಳಸಿಕೊಳ್ಳುತ್ತಿದ್ದಾರೆ.ಅಂಕೋಲಾ ಬಸ್ ನಿಲ್ದಾಣದಲ್ಲಿ ಪರ್ಸ್ ಕಳ್ಳತನವಾಗುತ್ತಿರುವ ಬಗ್ಗೆ ವರದಿಯಾಗಿದೆ.

ಲಇಂದು ಶನಿವಾರ ಮಧ್ಯಾಹ್ನ 4-15ರ ಸುಮಾರಿಗೆ ಅಂಕೋಲಾದಿಂದ ಕುಮಟಾಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಣಿಕರೊಬ್ಬರು ಕಾರವಾರದಿಂದ ಕುಮಟಾ ಹೊರಡುವ ಬಸ್ ಹತ್ತುವ ವೇಳೆ ಅವರ ಜೇಬಿನಲ್ಲಿದ್ದ ಪರ್ಸ್ ಕಳ್ಳತನಮಾಡಿದ್ದಾರೆ‌. ಪ್ರಯಾಣಿಕ ಓರ್ವ ಬಸ್ ಹತ್ತಿದ ಸ್ವಲ್ಪ ದೂರ ಹೋಗುತ್ತಿದ್ದಂತೆ ಟಿಕೆಟ್ ಪಡೆದುಕೊಳ್ಳಲು ಕಂಡಕ್ಟರ್ ಅವರಿಗೆ ಹಣ ಕೊಡಬೇಕು ಎಂದು ಪರ್ಸ್ ಹುಡುಕಾಟ ನಡೆಸಿದ್ದಾರೆ‌.

ಆಗ ತನ್ನ ಜೇಬಿನಲ್ಲಿದ್ದ ಪರ್ಸ್ ಕಳ್ಳತನವಾಗಿರುವುದು ಆ ಪ್ರಯಾಣಿಕನಿಗೆ ಗೊತ್ತಾಗಿದೆ. ಆದರೂ ಕೂಡ ಬಸ್ ಒಳಗೆ ಹುಡುಕಾಟ ನಡೆಸಿದ್ದರು. ಪರ್ಸ್ ಸಿಗಲಿಲ್ಲ. ತಾನು ಬಸ್ ಹತ್ತುವಾಗಲೇ ಯಾರೋ ಜೇಬಿನಿಂದ ಫರ್ಸ್ ತೆಗದ ಹಾಗೆ ಅನಿಸಿತ್ತು. ಆದರೆ ಬಸ್ ಹತ್ತುವಾಗ ಭಾರೀ ಜನ ಒತ್ತಾಟ ಮಾಡಿ ಬಸ್ ಹತ್ತುತ್ತಿರುವುಸರಿಂದ ಅದು ಗೊತ್ತಾಗಿರಲಿಲ್ಲ. ಎಂದು ಹೇಳಿಕೊಂಡಿದ್ದಾರೆ.

ತಕ್ಷಣ ಬಸ್ ಕಂಡಕ್ಟರ್ ಅಂಕೋಲಾ ಬಸ್ ನಿಲ್ದಾಣಕ್ಕೆ ಪೋನ್ ಕರೆ ಮಾಡಿ ಪರ್ಸ್ ಕಳ್ಳತನ ಮಾಡಿರುವ ವಿಚಾರವನ್ನ ತಿಳಿಸಿದ್ದಾರೆ.ಹೀಗಾಗಿ ಹಬ್ಬ ಸಮಯದಲ್ಲಿ ಬಸ್ ನಲ್ಲಿ ಪ್ರಯಾಣಿಸುವವರು ತುಂಬಾ ಎಚ್ಚರಿಕೆಯಿಂದ ಇರಬೇಕಾಗಿದ್ದು, ಪೊಲೀಸ ಇಲಾಖೆ ಸಹ ಇಂತಹ ಸಮಯದಲ್ಲಿ ಬಸ್ ನಿಲ್ದಾಣಗಳಲ್ಲಿ ಹಿಂದಿಗಿಂತ ಹೆಚ್ಚಿನ ಸಿಬ್ಬಂದಿಗಳನ್ನ ನಿಯೋಜನೆ ಮಾಡಬೇಕಿದೆ.