ಸುದ್ದಿಬಿಂದು ಬ್ಯೂರೋ
ಕಾರವಾರ ; ಉತ್ತರಕನ್ನಡ ಜಿಲ್ಲೆಯ ಜನರ ಸ್ವಾಭಿಮಾನದ ಪಾದಯಾತ್ರೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ (Multi Specialty Hospital) ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ನಾಳೆ ನವೆಂಬರ್ 02 ರಿಂದ 9ರ ತನಕ ಶಿರಸಿಯಿಂದ ಕಾರವಾರದ ವರೆಗೆ ನಡೆಯಲಿರವ ಪಾದಯಾತ್ರೆಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿರುವ(Freedom Fighter) ಕಾಶಿನಾಥ ಮೂಡಿ ಅವರು ನಾಳೆ ಚಾಲನೆ ನೀಡಲಿದ್ದಾರೆ.

ಅನಂತಮೂರ್ತಿ ಹೆಗಡೆ(Ananthamurthy Hegde) ಅವರ ಮುಂದಾಳತ್ವದಲ್ಲಿ ಈ ಪಾದಯಾತ್ರೆ ಆರಂಭವಾಗಲಿದೆ. ಮಲನಾಡಿನ ಹೆಬ್ಬಾಗಿಲು ಶಿರಸಿಯಲ್ಲಿ ಪಾದಯಾತ್ರೆಗೆ ಚಾಲನೆ ಸಿಗಲಿದ್ದು, ಶಿರಸಿಯಿಂದ ಕುಮಟಾ ತಲುಪಲಿದ್ದು,ನಂತರದಲ್ಲಿ ಕುಮಟಾದಿಂದ ದಿವಗಿ,ಮಿರ್ಜಾನ, ಬರ್ಗಿ,ಹಿರೇಗುತ್ತಿ,ಮಾದನಗೇರಿ ಮಾರ್ಗವಾಗಿ ಪಾದಯಾತ್ರೆ ಕಾರವಾರ ತಲುಪಲಿದೆ.

ಪಾದಯಾತ್ರೆ ಉದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ.ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿರುವ ಮೆಡಿಕಲ್ ಆಸ್ಪತ್ರೆ ಕುರಿತಾಗಿ ಪಾದಯಾತ್ರೆ ಉದ್ದಕ್ಕೂ ಹೋರಾಟಗಾರು, ನ್ಯಾಯವಾದಿಗಳು, ಪತ್ರಕರ್ತರು,ರಾಜಕೀಯ ಪಕ್ಷದ ಮುಖಂಡರು ಹೆಜ್ಜೆ ಹಾಕಲಿದ್ದು,ಮೆಡಿಕಲ್ ಕಾಲೇಜು ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುರಿತಾಗಿ ಸರಕಾರದ ಗಮನ ಸೆಳೆಯಲಿದ್ದಾರೆ.
.