suddibindu.in
Mangaluru ಮಂಗಳೂರು : ಮಂಗಳೂರು ಜಿಲ್ಲಾದ್ಯಂತ ವ್ಯಾಪಕವಾಗಿ ಮಳೆ ಮುಂದುವರೆದಿದ್ದು, ನಾಳೆ ಸಹ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ನಾಳೆ ಮಳೆ‌ ಮುಂದುವರೆಯುವ (Mangaluru heavy rain) ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲಾ‌ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ರಜೆ ಘೋಷಣೆ ಮಾಡಿದ್ದಾರೆ.

ಮಂಗಳೂರು ಜಿಲ್ಲೆಯಲ್ಲಿನ‌‌ ಎಲ್ಲಾ ಖಾಸಗಿ,ಅನುದಾನಿತ ಹಾಗೂ ಸರಕಾರಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ನಿನ್ನೆಯಿಂದ ಮಂಗಳೂರು ಜಿಲ್ಲಾದ್ಯಂತ ‌ಸುರಿದ ಭಾರೀ ಮಳೆಗೆ ಮಂಗಳೂರಿನ ಹೊರ ವಲಯದಲ್ಲಿ ಕಾಂಪೌಂಡ್ ಗೋಡೆ ಕುಸಿದು ಮನೆಯ ಗೋಡೆ ಮೇಲೆ ಬಿದ್ದು ಒಂದೇ ಕುಟುಂಬದ ಇಬ್ಬರೂ ಮಕ್ಕಳು ಸೇರಿ ನಾಲ್ವರು ದುರಂತ ಸಾವು ಕಂಡಿದ್ದಾರೆ. ಇನ್ನೂ ಸಹ ಮಳೆ‌ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ‌‌ ಮಾಹಿತಿ‌ ನೀಡಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಹಿನ್ನಲೆಯಲ್ಲಿ ರಜೆ‌ಘೋಷಣೆ‌ ಮಾಡಲಾಗಿದೆ.

ಇದನ್ನೂ ಓದಿ

ನಾಲ್ವರು ಮೃತ ಪಟ್ಟ ಸುದ್ದಿ ತಿಳಿಯುತ್ತಿದಂತೆ ಕಂದಾಯ ಸಚಿವ ಕೃಷ್ಣ‌ ಬೈರೇಗೌಡ ಅವರು ಘಟನಾ ಸ್ಥಳ್ಕೆ ಭೇಟಿ ‌ನೀಡಿ ಪರಿಶೀಲನೆ ನಡೆಸಿದ್ದು, ಮೃತ ಕುಟುಂಬಕ್ಕೆ ಸರಕಾರದಿಂದ‌ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.