ಸುದ್ದಿಬಿಂದು ಬ್ಯೂರೋ
ಕಾರವಾರ
:ಚುನಾವಣಾ ಹಿನ್ನಲೆಯಲ್ಲಿ ನಾಳೆ ಹಾಗೂ ನಾಡಿದ್ದು ಈ ಎರಡು ದಿನಗಳ ಕಾಲ ಉತ್ತರಕನ್ನಡ ಜಿಲ್ಲೆಯ ದಿನನಿತ್ಯ ಓಡಾಡುವ ಪ್ರಯಾಣಿಕರಿಗೆ ಸಾರಿ ಬಸ್ ಸಂಚಾರದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

ನಾಳೆ‌ ಮೇ 2ರಂದು ಕಾರವಾರದಲ್ಲಿ ಶಿಕ್ಷಕರಿಗೆ ಚುನಾವಣಾ ತರಬೇತಿ ನಿಗದಿ ಮಾಡಲಾಗಿದೆ. ಈ ತರಬೇತಿಗೆ ಜಿಲ್ಲೆಯೆಯ ಎಲ್ಲಾ ತಾಲೂಕುಗಳಿಂದಲ್ಲೂ ಶಿಕ್ಷಕರನ್ನ ಕಾರವಾರದಲ್ಲಿರುವ ತರಬೇತಿ ಕೇಂದ್ರಕ್ಕೆ ಕರೆತರಲು ಈಗಾಗಲೆ ಶಿರಸಿ ಡಿವಿಜನ್ ಗೆ ಸೇರಿರುವ ಒಟ್ಟು 80 ಬಸ್ ಗಳನ್ನ ಕಾಯ್ದಿರಿಸಲಾಗಿದೆ. ಈಗಾಲೆ ಈ 80 ಬಸ್ ಗಳು ಸಹ ಸಂಚರಿಸುತ್ತಿದ್ದರು ಸಹ ಸರಿಯಾದ ಸಮಯಕ್ಕೆ ಬಸ್ ಇಲ್ಲದೆ ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿತ್ತು. ಆದರೆ ಈಗ ಇದರಿಂದಾಗಿ ಮತಷ್ಟು ಸಮಸ್ಯೆ ಆಗಲಿದೆ.

ಇನ್ನೂ ಮೇ 3ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಪಕ್ಣದ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮಕ್ಕೆ ಆಗಮಸುತ್ತಿದ್ದು, ಹೀಗಾಗಿ ಮೋದಿ ಕಾರ್ಯಕ್ರಮಕ್ಕೆ ಮೇ 3ರಂದು ಜಿಲ್ಲೆಯ ಎಲ್ಲಾ ಕಡೆಗಳಿಂದ ಕಾರ್ಯಕರ್ತರನ್ನ ಕರೆತರಲು ಕೆಎಸ್ಆರ್ಸಿಟಿ ಸಿಯ ಎಲ್ಲಾ ಬಸ್ ಗಳನ್ನು ಸಹ ಮೋದಿ ಕಾರ್ಯಕ್ರಮಕ್ಕೆ‌ ಬಳಸಿಕೊಳ್ಳಲಿದ್ದಾರೆ.

ಹೀಗಾಗಿ ದಿನ ನಿತ್ಯ ಕೆಲಸ ಕಾರ್ಯಗಳಿಗೆ ಹೋಗಬೇಕಾಗಿರುವ ಪ್ರಯಾಣಿಕರು ಬಸ್ ಸಂಚಾರವಿಲ್ಲದೆ ಮತ್ತಷ್ಟು ಪರದಾಟ ನಡೆಸಬೇಕಾದ ಪರಿಸ್ಥಿತಿ ಇದೆ. ಇದರಿಂದಾಗಿ ನಿತ್ಯವೂ ಬಸ್ ಅವಲಂಬಿಸಿಕೊಂಡು ಇದ್ದ ಪ್ರಯಾಣಿಕರು ಈ ಎರಡು ದಿನಗಳ‌ ಕಾಲ ಬೇರೆ ವ್ಯವಸ್ಥೆ ಮಾಡ ಕೊಳ್ಳಬೇಕಾಗಿರುವುದು ಅಭ್ಯಕವಾಗಿದೆ.