ಸುದ್ದಿಬಿಂದು ಬ್ಯೂರೋ
ಕುಮಟಾ : ಇಂದಿನ ದಿನದಲ್ಲಿ ಮೊಬೈಲ್ ವ್ಯಾಮೋಹದಿಂದಾಗಿ ಕರಾವಳಿ ಜಿಲ್ಲೆಯ ಯಕ್ಷಗಾನ ಕಲೆ ಅಳಿವಿನ ಅಂಚಿನಲ್ಲಿದೆ‌.ಯುವಕರು ಯಕ್ಷಗಾನ ಕಲೆಯಿಂದ ದೂರವಾಗುತ್ತಿದ್ದಾರೆ. ಎಂದು ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ನ ಯುವ ಮುಖಂಡ ಭೂವನ್ ಭಾಗ್ವತ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಮಟಾ ತಾಲೂಕಿನ ಬೆಟ್ಕುಳಿ ಗ್ರಾಮದ ನಾಮಧಾರಿ ಸಭಾಭವನದಲ್ಲಿ ನಾಮಧಾರಿ ಅಭಿವೃದ್ಧಿ ಸಂಘ(ರಿ) ಬೆಟ್ಕುಳಿ ಇವರ ಆಶ್ರಯದಲ್ಲಿ ನಡೆದ ಯಕ್ಷಗಾನ ಕಲಿಕಾ ಕೇಂದ್ರ ಹಾಗೂ ಯಕ್ಷಗಾನ ಉದ್ಘಾಟಿಸಿ ಮಾತನಾಡಿದ್ದರು.
ಮುಖ್ಯ ಅಥಿತಿಯಾಗಿ ಪಾಲ್ಗೊಂಡಿದ್ದ ತಾ.ಪಂ ಸದಸ್ಯ ಈಶ್ವರ ನಾಯ್ಕ ಕೋಡ್ಕಣಿ ಅವರು ಮಾತನಾಡಿ ಇಂದಿನ ದಿನದಲ್ಲಿ ಯಕ್ಷಗಾನ ಮರೆಯುತ್ತಿದ್ದೇವೆ ಕರಾವಳಿ ಜಿಲ್ಲೆ ಯಕ್ಷಗಾನದ ಗಂಡು ಮೆಟ್ಟಿನ ಸ್ಥಳ, ಯುವ ಪೀಳಿಗೆಯಲ್ಲಿ ‌ಯಕ್ಷಗಾನದ ಬಗ್ಗೆ ಅರಿವು ಮೂಡಿಸುವಂತಾಗಬೇಕಾಗಿದೆ. ಪ್ರತಿಯೊಬ್ಬರಲ್ಲಿಯೂ ಒಂದಲ್ಲ ಒಂದು ಕಲೆ ಅಡಗಿರುತ್ತದೆ. ಅವರಲ್ಲಿರುವ ಕಲೆಯನ್ನ ಹೊರ ತರುವ ಪ್ರಯತ್ನವಾಗಬೇಕಿದೆ.ಕಲೆ ಮಾರೆಯಾಗಲು ಆರ್ಥಿಕ ಸಮಸ್ಯೆ ಕೂಡ ಇದೆ.ನಮ್ಮಗೆಲ್ಲಾ ಯಕ್ಷಗಾನದ ಕಿಚ್ಚು ಹಚ್ಚಿಸಿದವರು ಕಿಮಾನಿಯ ಹನುಮಂತ ನಾಯ್ಕ ಅವರು. ನಮ್ಮ ನಾಡಿನ ಕಲೆ ಸಂಸ್ಕೃತಿ ಎಲ್ಲವೂ ಯಕ್ಷಗಾನದಲ್ಲಿ ಅಡಗಿದೆ ಎಂದು ಅಭಿಪ್ರಾಯ ಪಟ್ಟರು.

ಇದೇ ಸಂದರ್ಭದಲ್ಲಿ ಯಕ್ಷಗಾನ ತರಬೇತಿ ನೀಡಿದ ಜೆ ಕೆ ಹೆಗಡೆ ಅವರನ್ನ ಸನ್ಮಾನಿಸಿ ಗೌರವಿಸಲಾಯಿತು ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ ಕೆ ಹೆಗಡೆ ಅವರು.ಯಕ್ಷಗಾನ ಕಲಿಸುವುದು ನನಗೇನೂ ಹೊಸತಲ್ಲ.ಆರಂಭದಲ್ಲಿ ಯಕ್ಷಗಾನ ಕಲಿತು ಮುಂದೆ ದೊಡ್ಡ ಕಲಾವಿದರಾದ ನಂತರದಲ್ಲಿ ಕಲಿಸದವರನ್ನ‌ ನೆನಪಿಸಿಕೊಳ್ಳುವುದನ್ನ ಮರೆತು ದೊಡ್ಡ ದೊಡ್ಡ ಕಲಾವಿಧರಿಂದ ಕಲೆತಿರುವುದಾಗಿ ಹೇಳಿಕೊಳ್ಳುತ್ತಾರೆ ಇದು ಮನಸ್ಸಿಗೆ ಬೇಸರ ಉಂಟಾಗುವಂತೆ ಮಾಡುತ್ತದೆ.ಯಕ್ಷಗಾನದಲ್ಲಿ ಅಡಗಿರುವ ಕನ್ನಡ ಇಂಗ್ಲಿಷ್ ಶಾಲೆಗೆ ಹೋಗುವವರಿಗೂ ಅರ್ಥವಾಗುವುದು ಕಷ್ಟ. ಕನ್ನಡ ಕಲಿಕೆಯಲ್ಲೊಯೂ ಕೂಡ ಯಕ್ಷಗಾನ ಪ್ರಾಮುಖ್ಯತೆ ಇದೆ ಎಂದ ಅವರು ಇದೆ ರೀತಿ ಯಕ್ಷಗಾನ ಕಲಿಕಾ‌ ಕೇಂದ್ರಗಳು ಹಳ್ಳಿಹಳ್ಳಿಯಲ್ಲಿ ಆರಂಭವಾಗುವಂತಾಗಬೇಕು ಎಂದರು.

ವೇದಿಕೆಯಲ್ಲಿ ಬರ್ಗಿ ಗ್ರಾಮ ಪಂಚಾಯತ ಸದಸ್ಯ ರವಿಕುಮಾರ ಪಿ ನಾಯ್ಕ, ಬರ್ಗಿ ಗ್ರಾ.ಪಂ ಮಾಜಿ ಅಧ್ಯಕ್ಷೆ ವಿಶಲಾಕ್ಷಿ ಪಟಗಾರ, ಶಾಲಾ ಮುಖ್ಯಾಧ್ಯಾಪಕ ಎನ್ ಆರ್ ಪಟಗಾರ, ಉದ್ದಿಮೇದಾರರ ಸದಾನಂದ ಜಾಲಿಸತ್ಗಿ, ಬೆಟ್ಕುಳಿ ನಾಮಧಾರಿ ಸಮಾಜದ ಯಜಮಾನ ರಾಮನಾಥ ನಾಯ್ಕ, ಹಾಜರಿದ್ದರು. ಉದ್ದಿಮೆದಾರ ತುಕರಾಮ ನಾಯ್ಕ ಸ್ವಾಗತಿಸಿದರು ಶಿಕ್ಷಕ ಶೇಖಕರ ನಾಯ್ಕ ಮಾಲಿಗದ್ದೆ ಅವರು ಪ್ರಾಸ್ತಾವಿಕ ಮಾತನಾಡಿದರು, ಮುಕುಂದ ನಾಯ್ಮ ನಿರೂಪಿಸಿದರು.