ಸುದ್ದಿಬಿಂದು ಬ್ಯೂರೋ
ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಪ್ರಸಿದ್ದ ಕ್ರೀಡೆ ಸುಲು ಗಾಯಿ ( ಗೆಲ್ ಗಾಯಿ) ಬಹುತೇಕ ಕಣ್ಮೆಯಾಗುತ್ತಿರುವ ನಡುವೆ ತಾಲೂಕಿನ ಕೋಡ್ಕಣಿಯ ಯುವಕರ ತಂಡ ಸುಲುಗಾಯಿ ಪಂದ್ಯಾವಳಿಯನ್ನು ಆಯೋಜಿಸಿ ಕ್ರೀಡೆಗೆ ಮತ್ತಷ್ಟು ಮೆರಗು ತಂದಿದೆ.

ದೀಪಾವಳಿ ಹಬ್ಬದ ಅಂಗವಾಗಿ ಕೋಡ್ಕಣಿ ಯುವಕರ ತಂಡವು ಸುಲುಗಾಯಿ ಆಟವನ್ನು ಪಂದ್ಯಾವಳಿ ರೂಪದಲ್ಲಿ ಆಯೋಜನೆ ಮಾಡಿದ್ದು,ಈ ವೇಳೆ ತಾಲೂಕಿನ ಹಲವೆಡೆಯ ಸ್ಪರ್ಧಾಳುಗಳು ಪಾಲ್ಗೊಂಡರು.ಕಣ್ಣಳತೆಯ ದೂರದಲ್ಲಿ ಕಾಯಿಯನ್ನು ಇಟ್ಟು, ದೂರದಿಂದ ಕಲ್ಲಿನಿಂದ ಹೊಡೆದು ಕಾಯಿಯನ್ನು ಇಬ್ಬಾಗಿಸುವುದು ಈ. ಆಟದ ವಿಶೇಷತೆಯಾಗಿದ್ದು, ಈ ಆಟದಲ್ಲಿ ಗೆದ್ದ ಸ್ಪರ್ದಾಳುಗಳಿಗೆ ಕ್ರಮವಾಗಿ 8000, 4000,2000,1000 ರೂ.ಗಳ ನಗದನ್ನು ನೀಡಿ ಗೌರವಿಸಲಾಯಿತು.

ಪ್ರಥಮ ಶಿವಾರಾಜ ದಿವಗಿ,ದ್ವಿತಿಯ ಪರಮೇಶ್ವರ ಪಟಗಾರ ಪಡುವಣಿ,ತೃತೀಯ ಭಾರ್ಗವ,ಚತುರ್ಥ ರಾಜೇಶ ಪಟಗಾರ ಬೆಲೆ ಇವರು ಪಡೆದುಕೊಂಡರು.